ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ

0
35

21kdl-02ಕುಂದಗೋಳ,21: ಟಿಪ್ಪು ಸುಲ್ತಾನ್ ಮಹಾನ್ ದೇಶ ಭಕ್ತ ಹಾಗೂ ಬ್ರೀಟಿಷರ ವಿರುದ್ದ ಹೋರಾಡಿದ ಧೀರ ಹಾಗೂ ಶೂರ ವ್ಯಕ್ತಿಯಾಗಿದ್ದು, ಆತನ ಕಂಚಿನ ಪುತ್ಥಳಿಯನ್ನು ಶೀಘ್ರದಲ್ಲಿಯೇ ಪಟ್ಟಣದಲ್ಲಿ ಸ್ಥಾಪಿಸುವುದಾಗಿ ಶಾಸಕ ಸಿ.ಎಸ್.ಶಿವಳ್ಳಿ ಘೋಷಿಸಿದರು.
ಪಟ್ಟಣದ ಮೂರಂಗಡಿ ವೃತ್ತದ ಬಳಿಯ ಬ್ರಹ್ಮದೇವರ ದೇವಸ್ಥಾನದ ಮುಂಬಾಗದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಯುವಕ ಮಂಡಳವು ಶನಿವಾರ ಏರ್ಪಡಿಸಿದ್ದ ಟಿಪ್ಪು ಸುಲ್ತಾನನ 265ನೇ ಜಯಂತಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಈತನ ಜನ್ಮ ದಿನವನ್ನು ವಿರೋಧಿಸುವವರು ರಣಹೇಡಿಗಳು. ಅಂತವರ ಆಟ ನಿಲ್ಲಿಸಲು ಪಣ ತೊಡಬೇಕಾಗಿದ್ದು, ಭಾರತದಲ್ಲಿ ಎಷ್ಟು ಶೂರರಿದ್ದಾರೋ ಅಷ್ಟೇ ಸಂಖ್ಯೆಯಲ್ಲಿ ಹೇಡಿಗಳೂ ಸಹ ಇದ್ದಾರೆಂದು ಟೀಕಿಸಿದರಲ್ಲದೇ ನಾಶಿಕ್‍ನಲ್ಲಿ ಇಗಾಗಲೇ ಟಿಪ್ಪುವಿನ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದರು.
ಟಿಪ್ಪು ಸುಲ್ತಾನ್ ಮಹಾನ್ ದೇಶಭಕ್ತನಾಗಿದ್ದ ಆತನ ಶೂರತನವನ್ನು ಎಲ್ಲರೂ ಕಲಿಯಬೇಕಾಗಿದೆ. ಕಿತ್ತೂರ ರಾಣಿ ಚೆನ್ನಮ್ಮ ಳಂತೆ ಆತನೂ ಸಹ ಮಹಾನ್ ದಿಟ್ಟದೆಯ ದೇಶ ರಕ್ಷಕನಾಗಿದ್ದ ಆತ ತನ್ನ ಮಕ್ಕಳು ಒತ್ತೆಯಾಳಾಗಿ ಬ್ರೀಟಿಷರ ಕಪಿ ಮುಷ್ಠಿಯಲ್ಲಿದ್ದರೂ ಕೂಡ ಅಂಜದೇ ತನ್ನ ದೇಶಾಭಿಮಾನವನ್ನು ಮೆರದಿದ್ದಾನೆ. ಇಂಥಹ ಮಹಾನ್ ವ್ಯಕ್ತಿಯ ಇತಿಹಾಸ ಕಂಡೇ ಮುಖ್ಯಮಂತ್ರಿ ಸಿದ್ರಾಮಯ್ಯನವರು ಪ್ರತಿವರ್ಷವೂ ಈ ಮಹಾತ್ಮನ ಜನ್ಮದಿನವನ್ನು ಸರಕಾರಿ ಕಾರ್ಯಕ್ರಮವನ್ನಾಗಿ ರೂಪಿಸಿ ದಿಟ್ಟತೆ ತೋರಿದ್ದಾರೆ. ಇದನ್ನು ಯಾರ ಕಡೆಯಿಂದಲೂ ನಿಲ್ಲಿಸಲು ಸಾದ್ಯವಿಲ್ಲ. ಅಂತಹ ಪ್ರಯತ್ನಕ್ಕೆ ಕೈ ಹಾಕುವವರು ರಣ ಹೇಡಿಗಳಗಾತ್ತಾರೆ ಎಂದರು.
ಆತ ಮಡಿದಾಗ ಅವನ ಶವವನ್ನು ಮೂರು ದಿನಗಳವರೆಗೂ ಬ್ರೀಟಿಷರಿಗೆ ನೋಡಲು ಸಾದ್ಯವೇ ಆಗಲಿಲ್ಲ. ಅಂತಹ ದೈರ್ಯ ಅವರಲ್ಲಿ ಇರಲಿಲ್ಲ. ಅವನ ಖಡ್ಗವು ಆತ ಮರಣವನ್ನಪ್ಪಿದರೂ ಕೂಡ ವೈರಿಗಳನ್ನು ಅಂಜಿಸುತ್ತಿತ್ತು ಎಂದು ಹೇಳಿದರಲ್ಲದೇ ಅವರ ಸಾಹಸ ಶಕ್ತಿಯನ್ನು ಎಲ್ಲರೂ ಮನಗಾಣಬೇಕು ಅವನಂತೆ ಶೌರ್ಯವಂತರಾಗಬೇಕು ಎಂದು ಶಾಸಕ ಶಿವಳ್ಳಿ ಹೇಳಿದರು.
ಕಾಂಗ್ರೆಸ್ ಮುಖಂಡ ಅರವಿಂದ ಕಟಗಿ ಪ.ಪಂ.ಸದಸ್ಯರಾದ ರಾಜು ಶಿವಳ್ಳಿ, ವಿಠ್ಠಲ ಚವ್ಹಾಣ, ಬಸವರಾಜ ವಟವಟಿ, ಮೆಹಬೂಬಲಿ ನದಾಪ್, ಕಲ್ಲಪ್ಪ ಹರಕುಣಿ, ಸಿದ್ದಪ್ಪ ಚೂರಿ, ಎ.ಟಿ.ಹುಬ್ಬಳ್ಳಿ, ರಾಜೇಸಾಬ ಕಳ್ಳಿಮನಿ, ಇಸ್ಮಾಯಿಲ್ ಹರಕುಣಿ, ಅಸ್ಲಂ ಶೇಖ್, ಮಲ್ಲಿಕ್ ಶಿರೂರ, ಖೈಯಿಮ್ ನಾಲಬಂದ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎನ್.ಎಚ್.ಎಲಿಗಾರ ಕಾರ್ಯಕ್ರಮ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here