ಟೀಪ್ಪು ಸುಲ್ತಾನ್ ಜಯಂತಿಗೆ ಅಡ್ಡಿ ಖಂಡಿಸಿ ಪ್ರತಿಭಟನೆ

0
53

9kdl-02ಕುಂದಗೋಳ,9: ರಾಜ್ಯ ಸರಕಾರ ಟೀಪ್ಪು ಸುಲ್ತಾನ್ ಜಯಂತಿಯನ್ನು ಸರಕಾರಿ ಜಯಂತಿಯನ್ನಾಗಿ ಘೋಷಿಸಿರುವುದು ಅತ್ಯಂತ ಖಂಡನೀಯವಾಗಿದ್ದು, ಕಾರ್ಯಕ್ರಮದಲ್ಲಿ ನಡೆಯುವ ಯಾವುದೇ ಮೆರವಣಿಗೆಗೆ ಹಾಗೂ ಬೈಕ್ ರ್ಯಾಲಿಗೆ ಅವಕಾಶ ನೀಡದಿರುವಂತೆ ಆಗ್ರಹಿಸಿ ತಾಲೂಕ ವಿಶ್ವ ಹಿಂದೂ ಪರಿಷತ್ ಘಟಕ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸೋಮವಾರ ಬೆಳಿಗ್ಗೆ ಸೇರಿದ ನೂರಾರು ಹಿಂದೂಪರ ಕಾರ್ಯಕರ್ತರು, ತಹಶೀಲ್ದಾರ ಕಚೇರಿಗೆ ಆಗಮಿಸಿ ಈ ಕುರಿತಾದ ಮನವಿ ಅರ್ಪಿಸಲಾಯಿತು. ಇಂದು ಆಯೋಜಿಸಲಾಗಿರುವ ಜಯಂತಿಗೆ ಅವಕಾಶವನ್ನೇ ನೀಡಬಾರದು. ಹಿಂದೂ ಹಾಗೂ ದೇಶ ವಿರೋಧಿಯಾಗಿದ್ದ ಟಿಪ್ಪು ಜಯಂತಿಯನ್ನು ಸರಕಾರಿ ಜಯಂತಿಯನ್ನಾಗಿ ಸಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಖಂಡನೀಯವಾಗಿದೆ. ಅಲ್ಲದೇ ಗೋ ಹತ್ಯೆ ಕುರಿತಂತೆ ರಾಜ್ಯ ಸರಕಾರ ತಳೆದಿರುವ ನಿಲುವೂ ಕೂಡ ಹಿಂದೂಗಳ ಮನಸ್ಸಿಗೆ ನೋವನ್ನುಂಟು ಮಾಡಿದೆ ಎಂದು ದೂರಿದರು.
ಮೆರವಣಿಗೆ ಮುನ್ನ ಜಯಂತಿ ಆಚರಣೆಗೆ ಬೈಕ್ ರ್ಯಾಲಿ ನಡೆಸಲು ಅನುಮತಿ ನೀಡಬಾರದು. ಅಲ್ಲದೇ ಧ್ವನಿ ವರ್ಧಕ ಬಳಸುವ ಮೂಲಕ ಸಾರ್ವಜನಿಕರಿಗೆ ಭಂಗ ತರುವಂತಹ ಸಾಧ್ಯತೆ ಇದೆ. ಆ ಕಾರಣಕ್ಕಾಗಿ ಈ ಜಯಂತಿಗೆ ಯಾವುದೇ ಕಾರಣಕ್ಕೂ ಅವಕಾಶವನ್ನೇ ನಿಡಬಾರದು ಇದಕ್ಕೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಸೂಕ್ತ ನಿದರ್ಶನ ನೀಡುವಂತೆ ಮನವಿ ಮಾಡಿದರು.
ವಿಎಚ್‍ಪಿ ಮುಖಂಡರಾದ ಗಣೇಶ ಕೊಕಾಟೆ, ಪಾಂಡು ಕುಂಕೂರ, ಹರೀಶ ಕೊನೇರಿ, ಪ್ರದೀಪ ಕಾಳೆ,ರುದ್ರೇಶ ಬಳ್ಳಾರಿ, ಶ್ರೀಪಾದ ಅರಳಿಕಟ್ಟಿ ಸಹಿತ ನೂರರಾಉ ಕಾರ್ಯಕರ್ತರು ಈ ಸಂದಭ್ದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here