ಟ್ರಂಪ್‌ ಜೊತೆ ಮೂರನೇ ಶೃಂಗಸಭೆಗೆ ಸಿದ್ಧ: ಕಿಮ್‌ ಜಾಂಗ್ ಉನ್‌

0
4

ಟೋಕಿಯೋ – ಶೃಂಗಸಭೆ ನಡೆಸಲು ಅಮೆರಿಕ ಇಚ್ಛಿಸಿದಲ್ಲಿ ಡೊನಾಲ್ಡ್ ಟ್ರಂಪ್‌ ಅವರೊಂದಿಗೆ ಮೂರನೇ ಸುತ್ತಿನ ಮಾತುಕತೆ ನಡೆಸಲು ತಾವು ಸಿದ್ಧ ಎಂದು ಉತ್ತರ ಕೊರಿಯಾ ಅಧಿನಾಯಕ ಕಿಮ್‌ ಜಾಂಗ್ ಉನ್‌ ಹೇಳಿದ್ದಾರೆ.

ಮಾತುಕತೆ ಕುರಿತಂತೆ ಅಮೆರಿಕ ತೆಗೆದುಕೊಳ್ಳುವ ನಿರ್ಧಾರಕ್ಕೆ ವರ್ಷದ ಕೊನೆಯವರೆಗೆ ತಾವು ಕಾಯುವುದಾಗಿ ಕಿಮ್‌ ಜಾಂಗ್ ಉನ್‌ ಹೇಳಿದ್ದಾರೆ.
ಸರಿಯಾದ ಕಾರ್ಯಸೂಚಿಯೊಂದಿಗೆ ಅಮೆರಿಕ, ಉತ್ತರ ಕೊರಿಯಾದೊಂದಿಗೆ ಮಾತುಕತೆ ನಡೆಸಲು ಮುಂದೆ ಬಂದರೆ, ಮತ್ತೊಂದು ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ಆಲೋಚಿಸಲಾಗುವುದು. ಏನೇ ಆದರೂ ಅಮೆರಿಕದ ದಿಟ್ಟ ನಿಲುವಿಗೆ ಈ ವರ್ಷದ ಕೊನೆಯವರೆಗೆ ಕಾಯಲಾಗುವುದು. ಆದರೆ, ಹಿಂದಿನ ಶೃಂಗಸಭೆಯಂತೆ ಉತ್ತಮ ಅವಕಾಶ ದೊರೆಯುವುದು ಕಷ್ಟವಾಗಬಹುದು ಎಂದು ಉನ್‌ ಹೇಳಿದ್ದಾರೆ.

ಅಮೆರಿಕ ಮತ್ತು ಉತ್ತರಕೊರಿಯಾ, ಎರಡೂ ದೇಶಗಳ ಹಿತಾಸಕ್ತಿಗಳನ್ನು ಗೌರವಿಸಿದರೆ, ಮುಂದಿನ ಮಾತುಕತೆ ವೇಳೆ ದ್ವಿಪಕ್ಷೀಯ ಒಪ್ಪಂದವೊಂದಕ್ಕೆ ಸಹಿ ಹಾಕಲಾಗುವುದು. ಅಮೆರಿಕದ ನಿಲುವನ್ನು ಈ ಮಾತುಕತೆ ಆಧರಿಸಲಿದೆ. ಅಮೆರಿಕ-ಉತ್ತರ ಕೊರಿಯಾ ನಡುವೆ ವಾಣಿಜ್ಯ ಬಿಕ್ಕಟ್ಟುಗಳಿದ್ದರೂ, ಟ್ರಂಪ್‌ ಅವರೊಂದಿಗೆ ತಾವು ಉತ್ತಮ ಸ್ನೇಹ ಸಂಬಂಧ ಹೊಂದಿರುವುದಾಗಿ ಉನ್‌ ಹೇಳಿದ್ದಾರೆ.

ಈ ಹಿಂದೆ, ಸಿಂಗಾಪುರ ಮತ್ತು ವಿಯೆಟ್ನಾಂ ನಲ್ಲಿ ಟ್ರಂಪ್‌ ಮತ್ತು ಉನ್‌ ಶೃಂಗಸಭೆಗಳನ್ನು ನಡೆಸಿದ್ದರು.

loading...