ಟ್ರಂಪ್‍ ರಿಂದ ಅಮೆರಿಕ ನೂತನ ವಾಯಪಡೆ ಮುಖ್ಯಸ್ಥರ ನೇಮಕ

0
2
 ವಾಷಿಂಗ್ಟನ್ – ಅಮೆರಿಕ ನೂತನ ವಾಯುಪಡೆ ಮುಖ್ಯಸ್ಥರನ್ನಾಗಿ ಅಡ್ಮಿರಲ್ ಬಿಲ್ ಮೋರನ್ ಅವರನ್ನು ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ನೇಮಕಗೊಳಿಸಿದ್ದಾರೆ ಎಂದು ಅಲ್ಲಿನ ಸರ್ಕಾರದ ಪ್ರಕಟಣೆ ತಿಳಿಸಿದೆ.
 ಮೋರನ್ ಪ್ರಸ್ತುತ ನೌಕಾಪಡೆಯ ಉಪ ಮುಖ್ಯಸ್ಥರಾಗಿದ್ದು, ಸೆನೆಟ್‍ ಅನುಮೋದಿಸಿದರೆ, ಮೋರನ್‍ ಅವರು  ನಿವೃತ್ತರಾಗುತ್ತಿರುವ ಅಡ್ಮಿರಲ್ ಜಾನ್ ರಿಚರ್ಡ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
  ವಾಯುಪಡೆ ಮುಖ್ಯಸ್ಥರಾಗಿ ನಾಮನಿರ್ದೇಶನ ಮಾಡಿರುವುದಕ್ಕೆ ತಾವು ಕೃತಜ್ಞರಾಗಿರುವುದಾಗಿ ಮೋರನ್‍ ಹೇಳಿದ್ದು,  ಸಂಸತ್‍ ಅನುಮೋದನೆಯನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ.
 2016ರ ಮೇ 31ರಿಂದ ನೌಕಾ ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ, ಮೋರನ್ ಫ್ಲೀಟ್ ಸಿದ್ಧತೆ ಮತ್ತು ಸಿಬ್ಬಂದಿ ಸುಧಾರಣೆ ವೃದ್ಧಿಸಲು ಶ್ರಮಿಸಿದ್ದಾರೆ.
   ಇದಕ್ಕೆ ಮುಂಚೆ, ನೌಕಾಪಡೆಯ ಮಾಜಿ ಪೈಲಟ್ ಆದ ಮೋರನ್ ಅವರು 2013 ರಿಂದ ನೌಕಾ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
  ನೌಕಾಪಡೆಯ ನೂತನ ಉಪಾಧ್ಯಕ್ಷರಾಗಿ ವೈಸ್ ಅಡ್ಮಿರಲ್ ರಾಬರ್ಟ್ ಬರ್ಕ್ ಅವರನ್ನು ಟ್ರಂಪ್‍ ನಾಮನಿರ್ದೇಶನ ಮಾಡಿದ್ದಾರೆಂದು ಸರ್ಕಾರ ತಿಳಿಸಿದೆ.
loading...