ಟ್ರಕ್ ಕದ್ದು ಸಾಗಿಸಿದ ಕಳ್ಳರು

0
16

ಅಥಣಿ. 11: ತಾಲೂಕಿನ ಕಾಗವಾಡದಲ್ಲಿ ರಸ್ತೆ ಬಳಿ ನಿಲ್ಲಿಸಿರುವ 10 ಗಾಲಿಯ ಟ್ರಕ್ ಒಂದು ಅಜ್ಞಾತ ಕಳ್ಳರು ಕಳ್ಳತನ ಮಾಡಿಕೊಂಡು ಫರಾರಿ ಯಾಗಿರುವ ಘಟನೆ ಕುಡಚಿ ಪೋಲಿಸ ಹದ್ದೆಯಲ್ಲಿ ಸಂಭವಿಸಿದೆ.

 ಶೇಡಬಾಳ ಗ್ರಾಮದ ಬಸವರಾಜ ಚನ್ನಪ್ಪಾ ಮನಗುಳಿ ಇವರ ಮಾಲ್ಕಿ ಟ್ರಕ ಕೆ.ಎ. 28,4823 ಜಮಖಂಡಿಯಿಂದ ಶೇಡಬಾಳಕ್ಕೆ ಬರುವಾಗ ಕುಡಚಿಯಲ್ಲಿ ನಿಲ್ಲಿಸಿದ್ದರು, ಮಂಗಳವಾರ ರಾತ್ರಿ 11 ಗಂಟೆಗೆ ಖಾಲಿ ಟ್ರಕ್ವನ್ನು ಕಳ್ಳತನ ಮಾಡಿ ಫರಾರಿಯಾಗಿದ್ದಾರೆ, ಸದರಿ ಟ್ರಕ್ ರಾತ್ರಿ 2 ಗಂಟೆಗೆ ಬೆಳಗಾವಿಯ ಟೋಲ್ ನಾಕಾದಿಂದ ಹುಬ್ಬಳಿಯತ್ತ ಸಾಗಿದೆ, ಈ ಬಗ್ಗೆ ಮುನಗುಳಿಯವರು ಪೋಲಿಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here