ಟ್ರಕ್-ದ್ವಿಚಕ್ರ ವಾಹನ ಅಪಘಾತ: ಮಹಿಳೆ ಸಾವು

0
33

ದಾಂಡೇಲಿ : ನಗರದ ಅಂಬೇವಾಡಿ ಶ್ರೀ ಗಣಪತಿ ದೇವಾಸ್ಥಾನದ ಸನಿಹದಲ್ಲಿ ದಾಂಡೇಲಿಯಿಂದ ಬರ್ಚಿ ಮಾರ್ಗವಾಗಿ ಹೋಗುತ್ತಿದ್ದ ಟ್ರಕ್ (ಆರ್.ಜೆ-19, ಜಿಇ 2642) ಮತ್ತು ಅಂಬೇವಾಡಿ ಕೈಗಾರಿಕಾ ವಸಾಹತು ಪ್ರದೇಶ ರಸ್ತೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಹೊಂಡಾ ಆಕ್ಟೀವಾ (ಕೆಎ-31, ಆರ್: 9764) ಪರಸ್ಪರ ಅಫಘಾತಕ್ಕೀಡಾಗಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಸ್ಥಳದಲ್ಲೆ ಸಾವನ್ನಪ್ಪಿ, ಒರ್ವ ಗಂಭೀರ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಬರ್ಚಿ ಮಾರ್ಗವಾಗಿ ಹೋಗುತ್ತಿದ್ದ ಟ್ರಕ್ ಮತ್ತು ಚರ್ಚಿನಲ್ಲಿ ಪ್ರಾರ್ಥನೆ ಮುಗಿಸಿ ಅಂಬೇವಾಡಿ ಕೈಗಾರಿಕಾ ವಸಾಹತು ಪ್ರದೇಶ ರಸ್ತೆÉಯಿಂದ ವಾಪಾಸ್ಸು ಬರುತ್ತಿದ್ದ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆ ಸ್ಥಳೀಯ ನವ ಗ್ರಾಮ ನಿವಾಸಿ ಸಮಾಧಾನಮ್ಮ ಚಂದ್ರಶೇಖರ ಬೆಲ್ಲಂ (ವ: 55) ಬಿದ್ದು, ಅವರ ತಲೆಗೆ ಟ್ರಕ್ಕಿನ ಚಕ್ರ ಹರಿದ ಕಾರಣ ತಲೆ ಮತ್ತು ಮುಖ ಅಪ್ಪಚ್ಚಿಯಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದರು. ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದ ಮೃತರ ಪತಿ ಚಂದ್ರಶೇಖರ ಬೆಲ್ಲಂ (ವ:59) ಅವರಿಗೆ ಬಲಭುಜಕ್ಕೆ ತೀವ್ರ ಗಾಯವಾಗಿದ್ದು, ಅವರನ್ನು ತಕ್ಷಣ ಹಳಿಯಾಳ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ.
ದಾಂಡೇಲಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸೈ ಉಲ್ಲಾಸ ಪರಿವಾರ ಅವರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ. ಟ್ರಕ್ ಚಾಲಕ ರಾಜಸ್ಥಾನದ ಜೋಧಪುರ ನಿವಾಸಿ ಗೋಪು ರಾಮರಾಜ ರಾಜಸ್ಥಾನ ಈತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೃತ ಸಮಾಧಾನಮ್ಮ ಚಂದ್ರಶೇಖರ ಬೆಲ್ಲಂ ಅವರ ಪಾರ್ಥಿವ ಶರೀರವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಹಾಜರುಪಡಿಸಲಾಗಿದ್ದು, ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ್ದ ಕುಟುಂಬಸ್ಥರ ಹಾಗೂ ಬಂಧುಬಳಗದ ರೋಧನ ಮನಕಲುಕುವಂತಿತ್ತು.

loading...

LEAVE A REPLY

Please enter your comment!
Please enter your name here