ಡಾ|| ಅಂಬೇಡ್ಕರ ಮೂರ್ತಿ ಅನಾವರಣ ವಿಳಂಬ ನೀತಿ ಖಂಡಿಸಿ ಡಿಎಸ್ಎಸ್ ಬೃಹತ್ ಪ್ರತಿಭಟನೆ

0
41

ಬಸವನಬಾಗೇವಾಡಿ: ಪಟ್ಟಣದಲ್ಲಿ ಕಳೆದ ಆರು ವರ್ಷಗಳಿಂದ ಡಾ|| ಅಂಬೇಡ್ಕರ ಮೂರ್ತಿ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿದಾಗ ಮಾತ್ರ ನೆಪಮಾತ್ರ ಕೆಲಸ ಮಾಡಿದ್ದು ವಿಳಂಬ ನೀತಿಯನ್ನು ಖಂಡಿಸಿ ಡಿಎಸ್ಎಸ್ ಹೋರಾಟ ಮಾಡಲು ಮುಂದಾದಾಗ ಮೂರ್ತಿ ಕೆತ್ತನೆ ಕಾರ್ಯ ಮುಗಿಯುವ ಹಂತ ತಲುಪಿದೆ ಶೀಘ್ರ ಅನಾವರಣಗೊಳಿಸಲಾಗುವದು ಎಂದು ಪುರಸಭೆ ಹಾಗೂ ಸಚಿವರು ಭರವಸೆ ನೀಡಿ ಈಗ  ದಲಿತ ಮುಖಂಡರಿಂದ ಹೇಳಿಕೆ ನೀಡಿಸಿ ದಲಿತರನ್ನು ಒಡೆದಾಳುವ ನೀತಿಯನ್ನು ಕೈಬಿಡಬೇಕೆಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ಸುರೇಶ ಮಣ್ಣೂರ ಕಿಡಿಕಾರಿದರು.

ಪಟ್ಟಣದಲ್ಲಿ ಡಾ|| ಬಿ.ಆರ್.ಅಂಬೇಡ್ಕರ ಮೂರ್ತಿ ಪ್ರತಿಷ್ಠಾಪಿಸಬೇಕು ಡಾ|| ಅಂಬೇಡ್ಕ ಭವನ ಅರ್ಧಕ್ಕೆ ನಿಂತಿದ್ದು ಸಮರೋಪಹಾದಿಯಲ್ಲಿ ಕಾಮಗಾರಿ ನಡೆಸಬೇಕೆಂದು ಸೇರಿದಂತೆ ವಿವಿಧ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿ ಸ್ಥಳೀಯ ಡಾ|| ಅಂಬೇಡ್ಕರ ವೃತ್ತದಿಂದ ಆರಂಭವಾದ ಬೃಹತ್ ಪ್ರತಿಭಟನಾ ರ್ಯಾಲಿಯು ಶ್ರೀ ಬಸವೇಶ್ವರ ವೃತ್ತದಲ್ಲಿ ಕೆಲಹೊತ್ತು ರಸ್ತೆತಡೆ ನಡೆಸಿ ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಸಂವಿಧಾನ ಪುರಸಭೆ ಈಗಾಗಲೇ ಶಿಲ್ಪಿಗೆ ಕೊಟ್ಟ 11ಲಕ್ಷ ರೂಗಳು ತನ್ನದೆಂದು ಹೇಳುತ್ತಿದ್ದು ಸಮಾಜ ಕಲ್ಯಾಣ ಇಲಾಖೆ ನೀಡಿದ 5ಲಕ್ಷ ರೂಗಳು ಎಲ್ಲಿಗೆ ಹೋಗಿವೆ ಎಂಬುವುದನ್ನು  ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.

ಸಮಿತಿಯು ಹೋರಾಟಕ್ಕೆ  ಮುಂದಾದಾಗ ಸಣ್ಣಪುಟ್ಟ ಕಾಮಗಾರಿ ಮಾಡುವ ಪುರಸಭೆ ತದನಂತರ ನಿದ್ರಾವಸ್ಥೆಗೆ ಜಾರಿ ತನ್ನ ಜವಾಬ್ದಾರಿ ಮರೆಮಾಚುತ್ತಿದೆ ಎಂದು ಆರೋಪಿಸಿದ ಅವರು ಈಗ ಹೋರಾಟಕ್ಕೆ ಸಿದ್ದವಾದಾಗ ಮೂರ್ತಿ ಕೆತ್ತನೆ ಕಾರ್ಯ ಮುಗಿದಿದೆ, ಶೀಘ್ರವೇ ಚಾಲನೆ ನೀಡಲಾಗುವದು ಎಂದು ಕೇಲವು ಮುಖಂಡರಿಂದ ಹೇಳಿಕೆ ನೀಡಿಸಿ ಮೌನಕ್ಕೆ ಶರಣಾಗಿದ್ದು ಅಷ್ಟಕ್ಕೂ ಮೂರ್ತಿ ಪ್ರತಿಷ್ಟಾಪನೆಗೆ ವೃತ್ತದಲ್ಲಿ ಕಾಮಗಾರಿಗೆ ಬಾಕಿ ಇದೆ, ಅಧ್ಯಕ್ಷರು, ಶಾಸಕರು ಭರವಸೆ ನೀಡಿದಾಗ ಆಶಾಭವನೆಯಿಂದ ಹಲವು ಬಾರಿ ಪ್ರತಿಭಟನೆ ಹಿಂಪಡೆಯಲಾಗಿದೆ, ಅಧ್ಯಕ್ಷರು ಲಿಖಿತ ಭರವಸೆ ನೀಡಿ ದಲಿತರನ್ನು ಒಡೆದು ಆಳುವ ಪದ್ದತಿಗೆ ಮುಂದಾಗಿದೆ ಎಂದು ಆರೋಪಿಸಿದರು.

ಡಾ|| ಅಂಬೇಡ್ಕರ ಮೂರ್ತಿ ಭವನವೂ ಅರ್ಧಕ್ಕೆ ನಿಂತಿದ್ದು ಅಲ್ಲದೆ ಹರಳಯ್ಯ ಸಮಾಜ ಅಂಗಡಿಗಳನ್ನು ಕಿತ್ತುಕೊಂಡು ಹೊರಹಾಕಿದೆ ಅವರ ಕುಟುಂಬ ಬೀದಿಗೆ ಬಂದಿವೆ ಕೂಡಲೇ ಅಂಗಡಿಗಳನ್ನು ನಿರ್ಮಿಸಿಕೋಡಬೇಕು,  ಹೋರಾಟ ನಮ್ಮ ಹಕ್ಕು ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೌಶವ್ಯಕ್ತಪಡಿಸಿದ ಅವರು ಸಂಸದರ, ಶಾಸಕರ, ಜಿಲ್ಲಾ ಪಂಚಾಯತ, ತಾ.ಪಂ ಸದಸ್ಯರ ಅನುದಾನವು ದುರ್ಬಳಕೆಯಾಗಿದ್ದು ಬೋಗಸ್ ಕಾಮಗಾರಿಯಾಗಿವೆ ತಪ್ಪಿತಸ್ಥರ ವಿರುದ್ಧ ಕೂಡಲೇ ಸೂಕ್ತಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಿಂದಗಿ ತಾಲೂಕ ಸಂಚಾಲಕ ಚಂದ್ರಕಾಂತ ಸಿಂಗೆ ಮಾತನಾಡಿ ಗ್ರಾಮ ಪಂಚಾಯತಿ ರೋಸ್ಟರ ಅನುಸರಿಸದೆ  ಮನೆ ಹಂಚಿಕೆ ಮಾಡುತ್ತಿದ್ದು ಸರಿಪಡಿಸಬೇಕು ಅಲ್ಲದೆ ಭೂರಹಿತ ದಲಿತ ಜನಾಂಗಕ್ಕೆ ಭೂಮಿ ಒದಗಿಸಬೇಕು ಪಟ್ಟಣದಲ್ಲಿ ಬಾಲಕರ ಕಾಲೇಜು ಹಾಸ್ಟೇಲ್ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ ತಾಲೂಕ ಅಧ್ಯಕ್ಷೆ ರುಕ್ಮೀಣಿ ರಾಠೋಡ, ಕನ್ನಡಸೇನೆ ಅಧ್ಯಕ್ಷ ರಮ್ಜಾನ್ ಹೆಬ್ಬಾಳ, ರಾವುತ್ ತಳಕೇರಿ ಮುಂತಾದವರು ಮಾತನಾಡಿದರು, ಪ್ರತಿಭಟನೆ ನೇತೃತ್ವವನ್ನು  ತಾಲೂಕ ಸಂಚಾಲಕ ಮುತ್ತಣ್ಣ ಚಲವಾದಿ, ಜಿಲ್ಲಾ ಖಚಾಂಚಿ ಕಾಮೇಶ ಭಜಂತ್ರಿ, ಮುಖಂಡರಾದ ಪ್ರಶಾಂತ ಚಲವಾದಿ, ಪರಶುರಾಮ ಲಗಳಿ, ಶೇಖರ ನಡಗೇರಿ, ಶಂಕರ ನನ್ನಿಕೇರಿ, ಪವಾಡೆಪ್ಪ ಮಾದರ, ಸೋಮು ಹಂಗರಗಿ, ಮುದಕು ದಿಂಡವಾರ, ಪಿ.ಡಿ.ಭೂತನಾಳ, ಸಿದ್ದ ಭೈರವಾಡಗಿ, ದೇವೇಂದ್ರ ಹಾದಿಮನಿ, ಹರೀಶ ಬಸರಿಕಟ್ಟಿ,  ಬಸವರಾಜ ಬಳೂತಿ, ಮಹೇಶ ಮುತ್ತಗಿ ಮುಂತಾದವರು ವಹಿಸಿದ್ದರು ಶಿರಸ್ತೆದಾರ ಕುಲಕರ್ಣಿ ಅವರಿಗೆ ಬೇಡಿಕೆ ಮನವಿ ಪತ್ರವನ್ನು ಗುರು ಗುಡಿಮನಿ ಸಲ್ಲಿಸಿದರು.

 

loading...

LEAVE A REPLY

Please enter your comment!
Please enter your name here