ಡಾ. ಶ್ಯಾಮ ಪ್ರಸಾದ ಮುಖರ್ಜಿಯವರ ಬಲಿದಾನ ದಿನಾಚರಣೆ

0
21

ಮುಧೋಳ : ಮಹಾನ್ ವ್ಯಕ್ತಿಗಳ ನಡೆ ಮತ್ತು ನುಡಿ ಎರಡೂ ಒಂದೇ ಆಗಿರುತ್ತದೆ. ಅಂದರೆ ಅವರು ಮಹಾನ್ ವ್ಯಕ್ತಿತ್ವಗಳ ಬದುಕು ಕೂಡಾ ಹಾಗೇ ಇರುತ್ತದೆ. ಅವರ ನಡೆ ಮತ್ತು ನುಡಿಯಲ್ಲಿ ಸಮನ್ವಯತೆ ಕಾಣುತ್ತದೆ. ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ: ಶ್ಯಾಮ ಪ್ರಸಾದ ಮುಖರ್ಜಿ ಮತ್ತು ರಾಷ್ಟಿçÃಯ ಸ್ವಯಂ ಸೇವಕ ಸಂಘದ ನೇತಾರ ಕರ್ನಾಟಕದ ಕೇಸರಿ ಜಗನ್ನಾಥ ಜೋಶಿರವರ ವ್ಯಕ್ತಿತ್ವಗಳಲ್ಲಿ ಒಂದು ಕಾಕತಾಳಿಯವೆಂದರೆ ಇಂದು ಶ್ಯಾಮ ಪ್ರಕಾಶ ಮುರ್ಖಜಿಯವರ ೬೬ನೇ ಸ್ಮರಣ ದಿನ ಮತ್ತು ಜಗನ್ನಾಥರಾಯರ ೯೯ನೇ ಜನ್ಮದಿನ ದೇಶದ ಘನತೆ, ಅಂಖಡತೆ ಮತ್ತು ಒಂದು ಸಿದ್ದಾಂತಕ್ಕಾಗಿ ಶ್ರಮಿಸಿದ ಈ ಎರಡು ಮಹಾನ್ ವ್ಯಕ್ತಿಗಳು ತಮ್ಮ ಆದರ್ಶ ನಡೆ-ನುಡಿಗಳಿಂದ ಸ್ಮರಿಸಿದರು ಅಲ್ಲದೇ ಈಗಿನ ಯುವ ಪೀಳಿಗೆಗೆ ಅವರ ಅದರ್ಶವನ್ನು ದಾರಿದೀಪವಾಗಿ ಮಾಡಿಕೊಂಡು ಮುನ್ನಡೆಯ ಬೇಕೆಂದು ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಬಿ.ಹೆಚ್. ಪಂಚಗಾವಿ ವಕೀಲರು ಮಾತನಾಡಿದರು.
ಮುಧೋಳ ನಗರದ ಶಾಸಕರ ಗೃಹ ಕಚೇರಿಯಲ್ಲಿ” ಡಾ. ಶ್ಯಾಮ ಪ್ರಸಾದ ಮುಖರ್ಜಿಯವರ ಬಲಿದಾನ ದಿನವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಗ್ರಾಮೀಣ ಅಧ್ಯಕ್ಷ ಕೆ.ಆರ್. ಮಾಚಪ್ಪನವರ, ಕಾರ್ಯದರ್ಶಿ ಕುಮಾರ ಹುಲಕುಂದ, ಕಲ್ಲಪ್ಪ ಸಬರದ, ಬಸವರಾಜ ಮಳಲಿ, ನಗರ ಯುವ ಮೊರ್ಚಾ ಪ್ರದೀಪ ನಿಂಬಾಳಕರ, ತುಷಾರ ಭೋಪಳೆ, ಬಂಡು ರಜಪೂತ, ಗಣೇಶ ರಾಠೋಡ, ಹಣಮಂತ. ಹುಣಸಿಕಟ್ಟಿ, ಸಚಿನ ಹೂಗಾರ, ನಗರ ಸಭೆ ಸದಸ್ಯ ಕುಮಾರ ಪಮ್ಮಾರ, ಸದಾಶಿವ ಜೋಶಿ, ಪಿಂಟು ಕಲಾಲ ಉಪಸ್ಥಿತರಿದ್ದರು.

loading...