ಡಾ.ಸುನೀತಾ ಚವ್ಹಾಣ ಪರವಾಗಿ ಕಾಂಗ್ರೆಸ್ ಮುಖಂಡರು ಪ್ರಚಾರ

0
12

ವಿಜಯಪುರ : ಮೀಸಲು ಲೋಕಸಭಾ ಕ್ಷೆÃತ್ರದ ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಪರವಾಗಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ, ಮುಖಂಡ ಅಬ್ದುಲ್‌ಹಮೀದ್ ಮುಶ್ರಿÃಫ್ ಸೇರಿದಂತೆ ವಿವಿಧ ನಾಯಕರು ವಿಜಯಪುರ ನಗರದಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ನಗರದ ಹಕೀಂ ವೃತ್ತ ಮೊದಲಾದ ಕಡೆಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು.
ಕೆಪಿಸಿಸಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಪ್ರಕಾಶ ರಾಠೋಡ ಮಾತನಾಡಿ, ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು ಮನೆ-ಮನೆಗಳಿಗೆ ತೆರಳಿ ಹಿಂದಿನ ಯುಪಿಎ ಸರಕಾರ ಬಡವರಿಗೆ ಕೊಟ್ಟಂತಹ ಕಾರ್ಯಕ್ರಮಗಳನ್ನು ಹಾಗು ಹಿಂದಿನ ಸಿದ್ದರಾಮಯ್ಯನವರ ಸರಕಾರ ಕೊಟ್ಟಂತಹ ಅನೇಕ ಜನಪರ ಯೋಜನೆಗಳ ಬಗ್ಗೆ ಮತದಾರರಲ್ಲಿ ಅರಿವು ಮೂಡಿಸಿ ಮತ ಕೇಳಬೇಕು ಎಂಂದು ಕರೆ ನೀಡಿದರು. ಈ ಬಾರಿ ರಾಹುಲ್ ಗಾಂಧಿರವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಡವರಿಗಾಗಿ ಮಾಸಿಕ ೬,೦೦೦ ರೂ. ವಾರ್ಷಿಕ ೭೨,೦೦೦ರೂಪಾಯಿಗಳು ನೇರ ಬಡವರ ಖಾತೆಗೆ ಹಣ ಜಮಾ ಮಾಡುವುದನ್ನು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಹೇಳಿದ್ದನ್ನು ಮಾಡಿ ತೋರಿಸುತ್ತದೆ. ಹೀಗಾಗಿ ಈ ಬಾರಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ರಾಹುಲ್ ಗಾಂಧಿ ಅವರ ಕೈ ಬಲಪಡಿಸಿ ಪ್ರಧಾನ ಮಂತ್ರಿ ಮಾಡುವ ಪಣ ತೊಡೋಣ ಎಂದು ಕಾರ್ಯಕರ್ತರಿಗೆ ಕರ ಎನೀಇಡದರು.

ಎಂ.ಎಲ್.ಶಾಂತಗಿರಿ, ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಜೀತ್‌ಸಿಂಗ್ ಪರದೇಶಿ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಎಂ.ಎಂ.ಸುತಾರ, ಜಮೀರ್‌ಅಹ್ಮದ್ ಬಕ್ಷಿÃ, ಆರತಿ ಶಹಾಪೂರ, ಹೈದರ್ ನಧಾಪ್, ಅಜಾದ್ ಪಟೇಲ್, ಡಾ.ಗಂಗಾಧರ ಸಂಬಣ್ಣಿ, ಜಮೀರ್‌ಅಹ್ಮದ್ ಬಾಗಲಕೋಟ, ಮಹಾದೇವಿ ಗೋಕಾಕ, ಅಬ್ದುಲ್‌ಖಾದರ್ ಖಾದೀಮ್, ಸಾಹೇಬಗೌಡ ಬಿರಾದಾರ, ಇರ್ಫಾನ್ ಶೇಖ, ಮಲ್ಲು ತೊರವಿ, ಮೈನುದ್ದಿÃನ್ ಬೀಳಗಿ, ಜಮೀರ್ ಬಾಂಗಿ, ಇದ್ರೂಸ್ ಬಕ್ಷಿÃ, ಅನ್ವರ್ ದ್ರಾಕ್ಷಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಶಬ್ಬಿÃರ ಜಾಗೀರದಾರ, ಅಪ್ತಾಬಖಾದ್ರಿ ಇನಾಮದಾರ, ಪವೇಜ್ ಚಟ್ಟರಕಿ, ಉಪಸ್ಥಿತರಿದ್ದರು.

loading...