ಡಿಕೆಶಿಗಿಂತ ದೊಡ್ಡವರು ಬಿಜೆಪಿಯಲ್ಲಿದ್ದಾರೆ: ಮಾಜಿ‌ ಸಚಿವ ಸತೀಶ

0
32


ಬೆಳಗಾವಿ

ಮಾಜಿ‌ ಸಚಿವ ಡಿ.ಕೆ.ಶಿವಕುಮಾರ ಅರಿಗಿಂತ ದೊಡ್ಡವರು ಬಿಜೆಪಿಯಲ್ಲಿದ್ದಾರೆ. ಬಿಜೆಪಿಗೆ ಡಿಕೆಶಿ ಸೇರಲಿಲ್ಲ ಎಂಬ ಕಾರಣಕ್ಕೆ ಅವರ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶುಕ್ರವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಾಜಿ ಸಚಿವ, ಅನರ್ಹ ಶಾಸಕ‌ ರಮೇಶ ಜಾರಕಿಹೊಳಿಯ ಮೇಲೂ ಐಟಿ ದಾಳಿಯಾಗಿತ್ತು. ಅವರ ಮೇಲೆ ಐಟಿ ತನಿಖೆ ನಡೆಸುವ ಭಯದಲ್ಲಿ ರಮೇಶ ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿ‌ ಪರ ಬ್ಯಾಟ್ ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ‌ ಹಿಂದೆಯೂ ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಬಿಜೆಪಿ ಸೇರುವ ಆಫರ್ ಬಂದಿತ್ತು. ಅವರು ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ರಾಜಕೀಯವಾಗಿ ಅವರನ್ನು ಕಟ್ಟಿಹಾಕಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ‌ ವಿರುದ್ಧ ಹರಿಹಾಯ್ದರು.

ರಾಜಕೀಯವಾಗಿ ಬಿಜೆಪಿಯವರು ಮಾಜಿ ಸಚಿವ ಡಿ.ಕೆ.ಶವಕುಮಾರ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಡಿ.ಕೆ.ಶಿವಕುಮಾರ ಅವರಿಗಿಂಯ ದೊಡ್ಡವರು ಬಹಳ ಜನ ಇದ್ದಾರೆ.
ಎಷ್ಟೋ ಜನ ಕಾಂಗ್ರೆಸ್ ನವರ ಮೇಲೆ ಕೇಸ್ ಇದ್ದವು.
ಅಂತವರು ಬಿಜೆಪಿಗೆ ಸೇರಿದ ಮೇಲೆ ಆ ಕೇಸ್ ಕ್ಲೋಸ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ ಮೇಲೆ ಹಿಂದೆ ದಾಳಿಯಾಗಿತ್ತು.
ಬಿಜೆಪಿ ಸೇರುತ್ತಾರೆ ಎಂದಕೂಡಲೇ ಸದ್ಯ ಸ್ಟಾಪ್ ಇಟ್ಟಿದ್ದಾರೆ. ನಾಲ್ಕು ವರ್ಷ ಈ ರೀತಿ ಬೇದರಿಕೆ ಇರುತ್ತೆ.
ಡಿಕೆ ಶಿವಕುಮಾರ್ ಬಿಜೆಪಿ ಸೇರಲಿಕ್ಕೆ ಸುಮಾರು ವರ್ಷಗಳಿಂದ ಬೇಡಿಕೆ ಇತ್ತು. ಡಿಕೆಶಿ ಬಿಜೆಪಿ ಸೇರಿಲ್ಲ ಅಂತಾ ಈ ರೀತಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರಕಾರಕ್ಕೆ ಗಂಭೀರತೆ ಇಲ್ಲವೇ ಇಲ್ಲ. ಕೇಂದ್ರ ಸರ್ಕಾರ ಇಲ್ಲಿವರೆಗೂ ನೆರೆ ಹಾನಿಯ ಪರಿಹಾರ ಕೊಟ್ಟಿಲ್ಲ. ಈ ಕಾರಣಕ್ಕೆ ಬೆಳಗಾವಿಯಲ್ಲಿ ಸರ್ಕಾರದ ಗಮನ ಸೆಳೆಯಲು ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಎಂ.ಬಿ‌ ಪಾಟೀಲ್ ಸೇರಿದಂತೆ ಎಲ್ಲಾ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರಕಾರಕ್ಕೆ‌ ಎಚ್ಚರಿಸುವ ಕೆಲಸ ಮಾಡಲಾಗುವುದು ಎಂದರು.
ಸಿಎಂ ಯಡಿಯೂರಪ್ಪ ಎರಡು ದಿನಗಳ ಹಿಂದೆ ಬೆಳಗಾವಿ ಪ್ರವಾಸ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಹಾಗೂ ಸಚಿವರು ಸೇರಿದಂತೆ ಎಲ್ಲರೂ ಭರವಸೆ ಕೊಡುತ್ತಿದ್ದಾರೆ.ಬಿಜೆಪಿ ಸರ್ಕಾರ ರೈತರ ಪರವಾಗಿ ಶೋಷಿತರ ಪರವಾಗಿಲ್ಲ.ಒಂದು ಅಜೆಂಡಾ ಮೇಲೆ ರಾಜಕೀಯ ಮಾಡುತ್ತಾರೆ ಜನರ ಪರವಾಗಿ ಮಾಡಲ್ಲ. ಕರಾವಳಿಯಲ್ಲಿ ಸ್ವಾಭಾವಿಕ ಸಾವು ಆದ್ರೂ ಕಾಂಗ್ರೆಸ್ ನವರು ಕೊಲೆ‌ ಮಾಡಿದ್ರೂ ಅಂತಾ ಗಲಾಟೆ ಮಾಡುತ್ತಾರೆ. ಪ್ರವಾಹದಲ್ಲಿ ಬಿಜೆಪಿಯಿಂದ ಕಾಣಿಸುತ್ತಿಲ ಎಂದು ಕುಟುಕಿದರು.

loading...