ಡಿಕೆಶಿ ಕೆಟ್ಟ ರಾಜಕಾರಣ ಮಾಡುವುದು ಸರಿಯಲ್ಲ: ಸಚಿವ ಈಶ್ವರಪ್ಪ

0
39

 

ಬೆಳಗಾವಿ

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ ಆತ್ಮಹತ್ಯೆ ಯತ್ನದ ಹಿಂದೆ ಬಿಜೆಪಿ ನಾಯಕರ ಕೈವಾಡವೇ ಕಾರಣ ಎಂದಿರುವ ಡಿ.ಕೆ.ಶಿವಕುಮಾರ ಹೇಳಿಕೆಗೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ಪ್ರತ್ಯುತ್ತರ ನೀಡಿದರು.
ಶನಿವಾರ ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರು. ಅವರು ಆರೋಪ ಮಾಡಲು ಅಧಿಕಾರ ಇದೆ. ಅದಕ್ಕೆ ನಾವು ಪ್ರಶ್ನಿಸುವುದಿಲ್ಲ. ಹೈಕಮಾಂಡ್ ಗೆ ಏನೋ ಲೀಕ್ ಆಗಿದೆ ಅಂತಿದ್ದಾರೆ. ಅವರ ಹತ್ತಿರ ಇರಬೇಕಲ್ಲ ಎಂದು ಪ್ರಶ್ನಿಸಿದ ಅವರು, ಏನೋ ಲೀಕ್ ಆಗಿದೆ ಎಂದು ರಾಜದ ಜನರ ದಿಕ್ಕು ತಪ್ಪಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ನವರಿಗೆ ಹತಾಶೆ ಮನೋಭಾವನೆಯಿಂದ ಮಾತನಾಡುತ್ತಿದ್ದಾರೆ. ಎಲ್ಲ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಹತಾಶೆ ಮನೋಭಾವನೆಯಿಂದ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಎರಡು ಬಣ ಆಗಿವೆ. ಅದೇನೋ ಲೀಕ್ ಆಗಿದೆ ಅಂತಾರಲ್ಲ. ಅದೇನಾದರೂ ನಿಮ್ಮ ಕಡೆ ಕಾಫಿ ಇದ್ದರೆ ಅದನ್ನು ಬಹಿರಂಗ ಮಾಡಿ ಎಂದು ಡಿಕೆಶಿಗೆ ಸವಾಲ್ ಹಾಕಿದರು.

ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿ ಹೋಗಿದೆ‌. ಅದ್ಯಾವ ವಿಡಿಯೋ ಇದೆಯೋ ಅದನ್ನು ಡಿಕೆಶಿ ಬಹಿರಂಗ ಪಡಿಸಲಿ. ಕೆಪಿಸಿಸಿ ಅಧ್ಯಕ್ಷರಾಗಿ ದಾಖಲೆ ಇಲ್ಲದ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

loading...