ಡಿಜಿಟಲ್ ಪ್ರಚಾರ ವಾಹನಗಳಿಗೆ ಚಾಲನೆ

0
40

ರಬಕವಿ-ಬನಹಟ್ಟಿ : ಸಾಕಷ್ಟು ಸಂಖ್ಯೆಯಲ್ಲಿ ಯುವಕರು, ವಿದ್ಯಾವಂತರು ಈ ಭಾರಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಮಾಜಿ ಪ್ರಧಾನಿ ಎಸ್. ಡಿ. ದೇವೆಗೌಡ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಾಧನೆಗಳನ್ನು ತಿಳಿಸುವ ಉದ್ಧೇಶದಿಂದ ನಾಲ್ಕು ಡಿಜಿಟಲ್ ಪ್ರಚಾರ ವಾಹನಗಳ ಮೂಲಕ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ತೇರದಾಳ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರೊ. ಬಸವರಾಜ ಕೊಣ್ಣೂರ ತಿಳಿಸಿದರು.
ಅವರು ಶುಕ್ರವಾರ ಸ್ಥಳೀಯ ಜೆಡಿಎಸ್ ಕಾರ್ಯಲಯದ ಆವರಣದಲ್ಲಿ ಡಿಜಿಟಲ್ ಪ್ರಚಾರ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು. ಮಹಾಲಿಂಗಪುರ, ತೇರದಾಳ, ರಬಕವಿ-ಬನಹಟ್ಟಿ ಪ್ರದೇಶದಲ್ಲಿ ಒಂದೊಂದು ವಾಹನಗಳು ಪ್ರಚಾರ ನಡೆಸಿದರೆ ಮತ್ತೊಂದು ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲಿದೆ. ಈ ಒಂದು ಸಂದರ್ಭದಲ್ಲಿ ಪ್ರೊ. ಕೊಣ್ಣರ ಸಾರ್ವಜನಿಕರಿಗೆ ಮಾಡಿದ ಅನೇಕ ಸಹಾಯ ಸಹಕಾರಗಳನ್ನು ಮತ್ತು ಕ್ಷೇತ್ರದಲ್ಲಿ ಕೈಗೊಂಡ ಪಾದಯಾತ್ರೆಯ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗುವುದು.

ಪ್ರತಿಯೊಂದು ಪ್ರಚಾರ ವಾಹನದಲ್ಲಿ ಬೃಹತ್ ಡಿಜಿಟಲ್ ಎಲ್‍ಇಡಿ ಪರದೆಯನ್ನು ಅಳವಡಿಸಲಾಗಿದೆ. ಪ್ರತಿ ದಿನ ಎರಡು ಕಡೆ ಪ್ರದರ್ಶನ ನಡೆಯಲಿದೆ.
ಈ ಸಂದರ್ಭದಲ್ಲಿ ವಿಠ್ಠಲ ಮಲಾಬಾದಿ, ಪುರುಷೋತ್ತಮ ಚಿಂಡಕ, ಅಬೂಬಕರ ಗಾಡಬೋಲೆ, ಗಂಗಪ್ಪ ಜಕ್ಕನ್ನವರ, ಗೋವಿಂದ ಜಾಧವ, ಶಾನೂರ ರಾಮದುರ್ಗ ಕುಮಾರ ಮಟ್ಟಿಕಲ್ಲಿ ಸೇರಿದಂತೆಅನೇಕರು ಇದ್ದರು.

loading...