ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯನ್ನು ಸಿಬಿಐಗೆ ವಹಿಸಲು ಆಗ್ರಹ

0
24

ದಾಂಡೇಲಿ : ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಆತ್ಮಹತ್ಯೆ ಮಾಡುವ ಮುನ್ನ ಗಣಪತಿಯವರು ಉಲ್ಲೇಖಿಸಿರುವ ಸಚಿವ ಜಾರ್ಜ್ ಮತ್ತು ಹಿರಿಯ ಅಧಿಕಾರಿಗಳ ರಾಜಿನಾಮೆಯನ್ನು ಪಡೆಯಲು ಮುಖ್ಯಮಂತ್ರಿಗಳಿಗೆ ಆಗ್ರಹಿಸಬೇಕೆಂದು ನಗರದ ಬಿಜೆಪಿ ಘಟಕವು ಉಪ ತಹಶೀಲ್ದಾರ್ ಕಛೇರಿಯ ಅಧಿಕಾರಿಯ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ.

ಸೋಮವಾರ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಿಜೆಪಿ ಘಟಕವು ಕೈಗೊಂಡ ಪ್ರತಿಭಟನೆಯಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷ ಸುಧಾಕರ ರೆಡ್ಡಿ ಮಾತನಾಡಿ ರಾಜ್ಯದ ಇತಿಹಾಸದಲ್ಲಿ ಎಂದೂ ಕಂಡರಿಯದ ರೀತಿಯಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಸರಕಾರದ ಸಚಿವರುಗಳಿಂದ ನಿರಂತರ ಕಿರುಕುಳಕ್ಕೊಳಗಾಗುತ್ತಿದ್ದಾರೆ. ಕೆಲವರು ರಾಜಿನಾಮೆ ಕೊಟ್ಟರೇ ಇನ್ನೂ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಂಗಳೂರಿನ ಡಿವೈಎಸ್ಪಿ ಗಣಪತಿಯವರು ಸಚಿವ ಜಾರ್ಜ್ ಹಾಗೂ ಹಿರಿಯ ಅಧಿಕಾರಿಗಳ ಕಿರುಕುಳದಿಂದಲೆ ಆತ್ಮಹತ್ಯೆ ಮಾಡಿರುವುದು ಆತ್ಮಹತ್ಯೆಯ ಮುನ್ನ ನೀಡಿದ ಅವರೇ ನೀಡಿದ ಹೇಳಿಕೆಯಲ್ಲಿ ಸ್ಪಷ್ಟವಾಗುತ್ತಿದೆ. ಗಣಪತಿಯವರ ಆತ್ಮಹತ್ಯೆ ಪ್ರಕರಣದ ಸತ್ಯಸತ್ಯತೆ ಹೊರಗೆ ಬರಬೇಕು ಮತ್ತು ಅವರ ಸಾವಿಗೆ ನ್ಯಾಯಕೊಡಬೇಕಾದರೇ ಪ್ರಕರಣವನ್ನು ಸಿಬಿಐಗೆ ನೀಡಲೇಬೇಕು ಹಾಗೂ ಸಚಿವ ಜಾರ್ಜ್ ಮತ್ತು ಹಿರಿಯ ಅಧಿಕಾರಿಗಳ ರಾಜಿನಾಮೆಯನ್ನು ಕೂಡಲೆ ಪಡೆಯಬೇಕೆಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಪಾಟೀಲ ಅವರು ರಾಜ್ಯ ಸರಕಾರದ ನಡೆಯನ್ನು ಕಟುವಾಗಿ ಟೀಕಿಸಿ, ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಸಚಿವರುಗಳ ಕಿರುಕುಳದಿಂದ ಒದ್ದಾಡುತ್ತಿದ್ದಾರೆ. ಗಣಪತಿಯವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಚಂದ್ರಕಾಂತ ಕ್ಷೀರಸಾಗರ, ದಶರಥ ಬಂಡಿವಡ್ಡರ, ಅಬ್ದುಲ್ ವಹಾಬ ಬಂಸಾರಿ, ಮಹಾದೇವಿ ಭದ್ರಶೆಟ್ಟಿ, ಮಂಜುನಾಥ ಹರಿಜನ, ಎಂ.ಎಸ್.ನಾಯ್ಕ, ಭೀಮಶಿ, ಭೀಮರಾವ್ ಪಾಟೀಲ. ವಿಶ್ವಹಿಂದೂ ಪರಿಷತ್ತಿನ ಗಣಾಚಾರಿ, ಭಜರಂಗದಳದ ಸಂಚಾಲಕ ಚಂದ್ರ ಮಾಲಿ, ಬಿಜೆಪಿ ಮುಖಂಡರುಗಳು, ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here