ಡಿ.ಕೆ ಶಿಗೆ ಸತೀಶ ಜಾರಕಿಹೊಳಿ ಅಭಿಮಾನಿಗಳ ಡಿಚ್ಚಿ ಮುಂದಿನ ಸಿಎಂ ಗಾದಿಗಾಗಿ ಸೊಸಿಯಲ್ ಮೇಡಿಯಾದಲ್ಲಿ ಪೈಟ್

0
894

ಡಿ.ಕೆ ಶಿಗೆ ಸತೀಶ ಜಾರಕಿಹೊಳಿ ಅಭಿಮಾನಿಗಳ ಡಿಚ್ಚಿ
ಮುಂದಿನ ಸಿಎಂ ಗಾದಿಗಾಗಿ ಸೊಸಿಯಲ್ ಮೇಡಿಯಾದಲ್ಲಿ ಪೈಟ್

ಆನಂದ ಭಮ್ಮನ್ನವರ

ಯಮಕನಮರಡಿ : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕೆಪಿಸಿಸಿ ಅದ್ಯಕ್ಷ ಸ್ಥಾನದ ಹಂಚಿಕೆ ಕಗ್ಗಂಟು ಮುಂದುವರೆದಿದೆ. ಇದರ ಜೊತೆಗೆ ೨೦೨೩ರ ಮುಖ್ಯಮಂತ್ರಿ ಗಾದಿಗಾಗಿ ಕಾಂಗ್ರೆಸ್ ನ ಪ್ರಭಾವಿ ನಾಯಕರ ಅಭಿಮಾನಿಗಳ ಮಧ್ಯ ಸಾಮಾಜಿಕ ಜಾಲತಾಣದಲ್ಲಿ ವಾರ್ ಆರಂಭವಾಗಿದೆ. ಈ ಮೂಲಕ ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರಗೆ ಸತೀಶ ಜಾರಕಿಹೊಳಿ ಅಭಿಮಾನಿಗಳ ಡಿಚ್ಚಿ ನೀಡಿದ್ದಾರೆ .
ಮುಂಬರುವ ೨೦೨೩ ರ ಸಿಎಂ ಸ್ಥಾನಕ್ಕಾಗಿ ಈಗಿನಿಂದಲ್ಲೆ ಕಾಂಗ್ರೆಸ್ ಪಾಳೆಯದಲ್ಲಿ ಪೈಪೋಟಿ ಆರಂಭವಾಗಿದೆ. ಘಟಾನುಘಟಿಗಳು ಸಿಎಂ ಸ್ಥಾನಕ್ಕಾಗಿ ಈಗಿನಿಂದಲೆ ಟಾವಲ್ ಹಾಕಲಾರಂಭಿಸಿದ್ದಾರೆ . ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಸತೀಶ ಜಾರಕಿಹೊಳಿ ಅಭಿಮಾನಿಗಳು ತಮ್ಮ ನಾಯಕರೆ ಮುಂದಿನ ಸಿಎಂ ಎಂದು ಪೋಸ್ಟ್ ಹಾಕುವುದರಲ್ಲಿ ಪೈಪೋಟಿ ಆರಂಭಿಸಿದ್ದಾರೆ . ಫೇಸ್‌ಬುಕ್‌ ದಲ್ಲಿ ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳಗವು ೨೦೨೩ ರಲ್ಲಿ ಸಿಎಂ ಯಾರು ಎಂಬ ಪೋಲ್ ರಚಿಸಿ ಪೋಸ್ಟ್ ಮಾಡಿದ್ದಾರೆ . ಇದರಲ್ಲಿ ಸತೀಶ ಜಾರಕಿಹೊಳಿಗೆ ೭೫% ಹಾಗೂ ೨೫% ರಷ್ಟು ಡಿ.ಕೆ ಶಿವಕುಮಾರಗೆ ಬೆಂಬಲ ನೀಡಿದ್ದಾರೆ.

ಉತ್ತರ ಕರ್ನಾಟಕ ಪ್ರಭಾವಿ ನಾಯಕ ಬೆಳಗಾವಿ ಸಾಹುಕಾರ್ ಸತೀಶ ಜಾರಕಿಹೊಳಿಗೆ ಕೆಪಿಸಿಸಿ ಅದ್ಯಕ್ಷ ಸ್ಥಾನ ನೀಡುವಂತೆ ಅವರ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಇದರ ಜೊತೆಗೆ ಡಿ.ಕೆ ಶಿವಕುಮಾರ್ ಜೊತೆ ಮೊದಲಿನಿಂದಲೂ ಅಷ್ಟಕಷ್ಟೆಯಿರುವ ಸತೀಶ ಜಾರಕಿಹೊಳಿ ಅಭಿಮಾನಿಗಳು ಫೇಸ್ಬುಕ್ ವಾರ್ ಆರಂಭಿಸಿದ್ದಾರೆ . ಈ ಹಿಂದೆ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣಾ ವೇಳೆ ಡಿ.ಕೆ ಶಿ ಮತ್ತು ಸತೀಶ ಜಾರಕಿಹೊಳಿ ನಡುವೇ ಬಹಳಷ್ಟು ಕಂದಕ ಸೃಷ್ಟಿಯಾಗಿತ್ತು .ಈಗ ಇಬ್ಬರೂ ಪ್ರಭಾವಿ ನಾಯಕರ ಬೆಂಬಲಿಗರ ಮಧ್ಯ ಕೋಲ್ಡ್ ವಾರ್ ಆರಂಭವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಮನೆಯೊಂದು ಮೂರು ಬಾಗಿಲೆಂಬಂತಾಗಿದ್ದು , ಕೆಪಿಸಿಸಿ ಅದ್ಯಕ್ಷ ಸ್ಥಾ‌ನದ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೇ ಶೀತಲ ಸಮರ ಆರಂಭವಾಗಿದ್ದು , ಡಿ‌ಕೆಸಿ ಗೆ ಕೆಪಿಸಿಸಿ ಸಾರಥ್ಯ ನೀಡದಂತೆ ಸಿದ್ದರಾಮಯ್ಯ ಹಲವು ದಾಳ ಉರಳಿಸಿದ್ದು ,ಅದರ ಪೈಕಿ ತಮ್ಮ ಕಟ್ಟಾ ಬೆಂಬಲಿಗ ಶಿಷ್ಯ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಕಾರ್ಯದ್ಯಕ್ಷ ಕೊಡಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಹೈ ಕಮಾಂಡ್ ಎರಡು ಕಾರ್ಯದ್ಯಕ್ಷ ಸ್ಥಾನ ರಚಿಸುವ ಚಿಂತನೆ ನಡೆಸಿದೆ .

ಕನಕಪುರ ಬಂಡೆ ಎಂದೆ ಕರೆಸಿಕೊಳ್ಳುವ ಕಾಂಗ್ರೆಸನ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರಗೆ ಕರ್ನಾಟಕ ಪ್ರದೇಶ ಕಾಂಗ್ರೆಸನ ಅಧ್ಯಕ್ಷ ಸ್ಥಾನದ ರೇಸ್ ದಲ್ಲಿದ್ದು , ಡಿ.ಕೆ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ ಎಂದು ಹೇಳಲಾಗುತ್ತದೆ .ಒಂದು ವೇಳೆ ಹೈಕಮಾಂಡ್ ಡಿ.ಕೆಶಿಗೆ ಅಧ್ಯಕ್ಷ ಸ್ಥಾ‌ನ ನೀಡಿದರೆ , ಡಿ.ಕೆ ಶಿವಕುಮಾರ ಟಕ್ಕರ್ ನೀಡಲು ತಮ್ಮ ಬೆಂಬಲಿಗರಿಗೆ ಕಾರ್ಯದ್ಯಕ್ಷ ಸ್ಥಾನ ನೀಡುವಂತೆ ಸಿದ್ದು ಮಾಸ್ಟರ್ ಪ್ಲ್ಯಾನ ರೂಪಿಸಿದ್ದಾರೆ .

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕರ ನಡುವೇ ಸಿಎಂ ಸ್ಥಾನಕ್ಕಾಗಿ ಈಗಿನಿಂದಲೆ ಪೈಪೋಟಿ ಆರಂಭವಾಗಿದ್ದು , ಸತೀಶ ಜಾರಕಿಹೊಳಿ ಕೂಡ ಕೆಪಿಸಿಸಿ ಅದ್ಯಕ್ಷ ಸ್ಥಾನದ ರೆಸ್ ದಲ್ಲಿದ್ದು, ಪಕ್ಷ ಜವಾಬ್ದಾರಿ ನೀಡಿದರೆ ನಿಭಾಯಿಸುವ ಮಾತನ್ನು ಆಡಿದ್ದಾರೆ . ೨೦೨೩ ರ ಚುನಾವಣೆ ಇನ್ನು ಮೂರು ವರ್ಷ ಇರುವಾಗಲೇ ಕಾಂಗ್ರೆಸ್ ಕಾರ್ಯಕರ್ತರ ಈ ಪೈಪೋಟಿ ಕೂಸು ಹುಟ್ಟುವ ಮೊದಲ ಕುಲಾಯಿ ಹೊಲೆಸಿದಂತಾಗಿದೆ .
ಭಾಕ್ಸ್

ಉತ್ತರ ಕರ್ನಾಟಕ ಪ್ರಭಾವಿ ರಾಜಕಾರಣಿಯಾಗಿರುವ ಮತ್ತು ಅಹಿಂದ ನಾಯಕರಾಗಿ ಹೊರಹೊಮ್ಮಿದ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅದ್ಯಕ್ಷ ಸ್ಥಾನ ಸೇರಿ ಯಾವುದೇ ಉನ್ನದ ಹುದ್ಧೆ ನೀಡಿದರು ನಿಭಾಯಿಸುವ ಶಕ್ತಿ ಇದ್ದು , ದೊಡ್ಡ ಮಟ್ಟದಲ್ಲಿ ಅಭಿಮಾನಿಗಳ ಹೊಂದಿರುವ ಸತೀಶ ಜಾರಕಿಹೊಳಿ ಅವರಿಗೆ ಅಧಿಕಾರ ನೀಡಿದರೆ ಪಕ್ಷ ಬಲವರ್ಧನೆಯಾಗಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ . ಬೆಳಗಾವಿ ಜಿಲ್ಲೆಯ ಸೇರಿದಂತೆ ಉ.ಕ ಎಲ್ಲ ಜಿಲ್ಲೆಯ ಜನರ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಸಾರಥ್ಯ ನೀಡಬೇಕೆಂಬ ಒತ್ತಾಯವಿದೆ .

ಕಿರಣಸಿಂಗ್ ರಜಪೂತ
ಕಾಂಗ್ರೆಸ್ ಮುಖಂಡರು ಯಮಕನಮರಡಿ

loading...