ಡೆತ್ ನೋಟ್ ಬರೆದು ನರ್ಸ್ ಆತ್ಮಹತ್ಯೆ

0
384

ಕನ್ನಡಮ್ಮ ಸುದ್ದಿ

ಬೆಳಗಾವಿ:12 ಬಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ರಾಜಶ್ರೀ ಕೇಸರಗೊಪ್ಪ 36 ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಶ್ರೀನಗರದ ನಿವಾಸದಲ್ಲಿ ಫ್ಯಾನಿಗೆ ನೇಣುಬೀಗಿದು ಡೆತನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೇ.ಸ್ವಖುಷಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತನೋಟ್ ಬರೆದಿಟ್ಟಿದ್ದಳೆ ಕೆಲ ವರ್ಷಗಳ ಹಿಂದೆ ರಾಜಶ್ರೀ ವಿವಾಹವಾಗಿತ್ತು. ಇವರಿಗೆ ೭ ವರ್ಷದ ಹೆಣ್ಣು ಮಗುವಿದೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...