ಡ್ರೈವಿಂಗ್ ಲೈಸೆನ್ಸ್ ಕಾರ್ಡ ವಿತರಣೆ

0
25

ಬಾಗಲಕೋಟ : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ, ಯುವತಿಯರಿಗೆ ಲಘುವಾಹನ ಚಾಲನಾ ತರಬೇತಿ ಪಡೆದವರಿಗೆ ಡ್ರೈವಿಂಗ್ ಲೈಸನ್ಸ್ ಕಾರ್ಡಗಳನ್ನು ಸೋಮವಾರ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಸವಂತಪ್ಪ ಮೇಟಿ ವಿತರಿಸಿದರು.
ಜಿಲ್ಲಾಡಳಿತ ಭವನದಲ್ಲಿರುವ ವಿಡಿಯೋ ಕಾನ್ಪರನ್ಸ್ ಹಾಲ್‍ನಲ್ಲಿ 2014-15ನೇ ಸಾಲಿಗೆ ಪರಿಶಿಷ್ಟ ಜಾತಿ ನಿರುದ್ಯೋಗಿ 40 ಜನ ಯುವಕ, ಯುವತಿಯರಿಗೆ ಲಘುವಾಹನ ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಸಾಂಕೇತಿಕವಾಗಿ 5 ಅಭ್ಯರ್ಥಿಗಳಿಗೆ ಡ್ರೈವಿಂಗ್ ಲೈಸನ್ಸ್ ಕಾರ್ಡ ವಿತರಣೆ ಮಾಡಿಲಾಯಿತು.
ಬಾಗಲಕೋಟೆಯ ಶ್ರೀಕಾಂತ ಚವ್ಹಾಣ, ಮುಚಖಂಡಿಯ ಆನಂದ ರಾಠೋಡ, ಆನಂದ ಲಮಾಣಿ, ಬಾಗಲಕೋಟೆಯ ಪಿ.ನವೀನಕುಮಾರ, ಅಶೋಕ ಲಮಾಣಿ ಹಾಗೂ ಹೊನ್ನಾಕಟ್ಟಿಯ ಯಮನಪ್ಪ ಗುಂಡಗಟ್ಟಿ ಅವರಿಗೆ ಲೈಸನ್ಸ್ ಕಾರ್ಡ ನೀಡಲಾಯಿತು. ಇದೇ ಸಂದರ್ಬದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂ.ಜಿ.ಹಿರೇಮಠ, ಸಮಾಜ ಕಲ್ಯಾಣಾಧಿಕಾರಿಗಳಾದ ಬಿ.ವ್ಹಿ.ಚೈತ್ರಾ ಸೇರಿದಂತೆ ಇತರರು ಉಪಸ್ಥತಿರಿದ್ದರು.

loading...

LEAVE A REPLY

Please enter your comment!
Please enter your name here