ತಂಗಡಗಿ ಪ್ರಾರ್ಥನೆ ಸಂಗಣ್ಣ ಕರಡಿಗೆ ವರಯಾಯಿತೆ.?

0
6

ಗಂಗಾವತಿ: ಲೋಕಸಭೆ ಚುನಾವಣೆ ಅಖಾಡ ಪ್ರಾರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯ ಮಾತುಗಳ ಮೂಲಕ ಕುಟುಕಿ ಬಿಜೆಪಿಯಿಂದ ಕೊಪ್ಪಳ ಕ್ಷೆತ್ರದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೇಟ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಅಭ್ಯರ್ಥಿ ಸುಲಭವಾಗಿ ಗೆಲ್ಲಲ್ಲು ಸಂಗಣ್ಣ ಕರಡಿಗೆ ಬಿಜೆಪಿ ಟಿಕೇಟ್ ಕೊಡಬೇಕೆಂದು ನಾವು ಪ್ರಾರ್ಥಿಸಿದ್ದೆÃವು ಎಂದು ಪ್ರಚಾರದಲ್ಲಿ ಹತ್ತಾರು ಭಾರಿ ಹೇಳಿಕೆ ನೀಡಿದ್ದರು. ಅವರ ಪ್ರಾರ್ಥನೆಯ ಹೇಳಿಕೆಯೇ ಸಂಗಣ್ಣ ಕರಡಿಗೆ ಗೆಲುವಾಗುವಲ್ಲಿ ಸಹಕಾರಿಯಾಯಿತೇ ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲೆ ಕೇಳಿ ಬರುತ್ತಿದೆ.
ಭಾರತೀಯ ಜನತಾ ಪಕ್ಷ ಕಳೆದ ಆರು ತಿಂಗಳ ಹಿಂದೆಯೇ ತಮ್ಮ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕೆಂದು ತಂತ್ರ ರೂಪಿಸಿದ್ದರು. ಅಭ್ಯರ್ಥಿಗಳ ಬಲಾ ಬಲಾ ಪರೀಕ್ಷಿಸಿಯೇ ಟಿಕೇಟ್ ನೀಡಿದ್ದರು. ಅದರಂತೆಯೇ ಕೊಪ್ಪಳ ಲೋಕಸಭೆಯಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೇಟ್ ನೀಡಿತ್ತು. ತಮ್ಮ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಯಾವ ರೀತಿ ಗೆಲ್ಲಿಸಬೇಕೆಂಬ ರಣತಂತ್ರ ರೂಪಿಸಲು ಮರೆತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಚುನಾವಣೆಯ ಪ್ರಚಾರ ವೇದಿಕೆಯಲ್ಲಿ ಪದೇ ಪದೇ ಸಂಗಣ್ಣ ಕರಡಿಗೆ ಪ್ರಭಾವ ಕಡಿಮೆಯಾಗಿದೆ. ಅವರಿಗೆ ಟಿಕೇಟ್ ಕೊಟ್ಟಿದ್ದಕ್ಕೆ ನಮಗೆ ಗೆಲುವು ಸುಲಭ. ಅವರಿಗೆ ಟಿಕೇಟ್ ನೀಡಲಿ ಎಂದು ಪ್ರಾರ್ಥಿಸಿದ್ದೆನೆ ಎಂದು ಪದೇ ಪದೇ ಹೇಳಿತ್ತಿರುವುದು ಎದುರಾಳಿಗಷ್ಟೆ ಅಲ್ಲ ಸ್ವತಃ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರಿಗೆ ಇರುಸು ಮುರುಸು ಆಗುತ್ತಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಈ ರೀತಿ ಮಾತನಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮಲ್ಲೆ ಹಾಕಿಕೊಳ್ಳುತ್ತಿದ್ದರು.
ಬಿಜೆಪಿ ಪಕ್ಷದ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರು ಎಲ್ಲಾ ಕ್ಷೆÃತ್ರದಲ್ಲಿ ಸಂಘಟಿತವಾಗಿ ನಡೆಸಿದ ಪ್ರಚಾರದ ಪ್ರಯತ್ನದಿಂದಾಗಿ ಹಾಲಿ ಸಂಸದ ಸಂಗಣ್ಣ ಕರಡಿಗೆ ಗೆಲುವಾಗಿರುವುದು ನೂರಕ್ಕೆ ನೂರು ಸತ್ಯ. ಆದರೆ ಶಿವರಾಜ ತಂಗಡಗಿ ಸಂಗಣ್ಣ ಕರಡಿಗೆ ಸೋಲುತ್ತಾರೆ ಎಂಬ ಪ್ರಾರ್ಥನೆ ವರಯಾಯಿತೆ ಎಂಬ ಪ್ರಶ್ನೆ ಫಲಿತಾಂಶ ಹೊರಬರುತ್ತಿರುವಂತೆ ಹರಿದಾಡುತ್ತಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ಬಳಸಿದ್ದ ಮಾತುಗಳೇ ಅವರ ಪಕ್ಷದ ಅಭ್ಯರ್ಥಿ ರಾಜಶೇಖರ ಹಿಟ್ನಾಳಗೆ ಸೋಲಾಗಿದೆ ಎಂದು ರಾಜಕೀಯ ವಿಶ್ಲೆÃಷಣೆ ನಡೆಯುತ್ತಿದೆ.

loading...