ತಂತ್ರ- ಪ್ರತಿತಂತ್ರ

0
33

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈಗ ಭಾರತೀಯ ಜನತಾ ಪಕ್ಷದಲ್ಲಿ ತಮ್ಮ ಎರಡೂ ಕಾಲುಗಳನ್ನು ಸಂಪೂರ್ಣವಾಗಿ ಹೊರಗೆ ಇಟ್ಟಿರುವುದರಿಂದ ಯಡಿಯೂರಪ್ಪನವರ ತಂತ್ರಗಳಿಗೆ ಭಾಜಪ ನಾಯಕರು  ಪ್ರತಿ ತಂತ್ರವನ್ನು ಮಾಡತೊಡಗಿ ದ್ದಾರೆ.  ಮುಂದಿನ ತಿಂಗಳು 10 ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ ತಮ್ಮ ನೂತನ ಪಕ್ಷ ಕರ್ನಾಟಕ ಜನತಾ ಪಕ್ಷದ ಅಧೀಕೃತ ಘೋಷಣೆಯನ್ನು ಯಡಿಯೂರಪ್ಪ ಮಾಡಲಿದ್ದಾರೆ. ಆದರೆ ಈ ಸಮಾವೇಶದಲ್ಲಿ ಬಾಜಪ ಶಾಸಕರು ಪಾಲ್ಗೌಳ್ಳಬಾರದು ಎಂಬ ದೃಷ್ಠಿಯಿಂದ ಪ್ರತಿ ತಂತ್ರ ಮಾಡಿರುವ ಮುಖ್ಯ ಮಂತ್ರಿ ಜಗದೀಶ ಶೆಟ್ಟರ ಮುಂದಿನ ತಿಂಗಳು 5 ರಿಂದ  13 ರ ವರೆಗೆ ಬೆಳಗಾವಿಯ ನೂತನ ಸುವರ್ಣ ವಿಧಾನ ಸೌಧದಲ್ಲಿ  ವಿಧಾನ ಮಂಡಳದ ಚಳಿಗಾಲದ ಅಧಿವೇಶನ ನಡೆಸಲು ನಿರ್ಧರಿಸಿದ್ದಾರೆ. ಇದು ಸುವರ್ಣ ವಿಧಾನ ಸೌಧದಲ್ಲಿ ನಡೆಯಲಿರುವ ಮೊದಲ ವಿಧಾನ ಮಂಡಳ ಅಧಿವೇಶನ ಆಗಲಿದೆ.

ಮಂಗಳವಾರ ಬಿ. ಎಸ್. ಯಡಿತಯೂರಪ್ಪ ತಮ್ಮ ಡಾಲರ್ಸ ಕಾಲನಿ ನಿವಾಸದಲ್ಲಿ  ತಮ್ಮ ಬೆಂಬಲಿಗ ಸಚಿವರು ಮತ್ತು ಶಾಸಕರು ಹಾಗೂ ಸಂಸದರಿಗೆ ಏರ್ಪಡಿಸಿದ್ದ ಓತಣಕೂಟದಲ್ಲಿ 48 ಶಾಸಕರು 9 ವಿಧಾನ ಪರಿಷತ್ ಸದಸ್ಯರು ಹನ್ನೊಂದು ಸಚಿವರು  11 ಸಂಸದರು ಭಾಗವಹಿಸಿದ್ದರು.  ಯಡಿಯೂರಪ್ಪ ತಮಗೆ 70 ಶಾಸಕರ ಬೆಂಬಲ ಇದೆ. ಎಂದು ಹೇಳಿದ್ದರೂ ಸಹ ನಿನ್ನೆ ನಡೆದ ಓತಣ ಕೂಟದಲ್ಲಿ ಉಭಯ ಸದನಗಳ ಒಟ್ಟು 57 ಶಾಸಕರು ಮಾತ್ರ ಭಾಗವಹಿಸಿದ್ದರು.

ಡಿಸೆಂಬರ 10 ರ ನಂತರ ಕೆಜೆಪಿ ಪಕ್ಷ ಅಸ್ತಿತ್ವಕ್ಕೆ ಬಂದ ನಂತರ ಪಕ್ಷಾಂತರ ನಿಷೇಧ ಕಾನೂನಿನ ತೊಡಕಿನಿಂದ ತಪ್ಪಿಸಿಕೊಳ್ಳಲು ಭಾಜಪ ಮತ್ತು ಕೆಜೆಪಿ ಸಮ್ಮಿಶ್ರ ಸರಕಾರವನ್ನು  ರಾಜ್ಯದಲ್ಲಿ ಮುಂದುವರೆಸುವ ಬಗ್ಗೆ  ಚರ್ಚೆ ಮಾಡಲಾಗಿದೆ ಎಂದು ಹೇಳಲಾಗಿದೆ.  ಆದರೆ ಈ ಕುರಿತು ಯಾವ ಸೂತ್ರಗಳನ್ನು ರೂಪಿಸಲಾಗಿದೆ. ಈ ಒಪ್ಪಂದದ ಸ್ವರೂಪ ಏನು ಎಂಬುದು ಸ್ಪಷ್ಟವಾಗಿರುವುದಿಲ್ಲ ಆದರೆ ಮುಂದಿನ ಚುನಾವಣೆಯವರೆಗೆ ಜಗದೀಶ ಶೆಟ್ಟರ ಸರಕಾರವನ್ನೇ ಮುಂದುವರೆಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.  ಇದರಿಂದ ಹೊಸದಾಗಿ ಕೆ.ಜೆ.ಪಿ ಪಕ್ಷ ಅಸ್ತಿತ್ವಕ್ಕೆ ಬಂದರೂ ಸಹ ಜಗದೀಶ ಶೆಟ್ಟರ ಸರಕಾರಕ್ಕೆ ಚುನಾವಣೆಯ ವರೆಗೆ ಯಾವುದೇ ಭೀತಿ ಇಲ್ಲವೆಂದು ಹೇಳಲಾಗುತ್ತಿದೆ.

ಆದರೆ  ಈಗಾಗಲೇ ಭಾಜಪ ನಿಷ್ಠ ಸಚಿವರು ಹಾಗೂ ಯಡಿಯೂರಪ್ಪ ನಿಷ್ಠ ಸಚಿವರ ಮಧ್ಯೆ ಜಟಾಪಟಿಗಳು ನಡೆಯತೊಡಗಿವೆ. ಈ ಮೊದಲು ವಸತಿ ಸಚಿವ ಸೋಮಣ್ಣ ಹಾಗೂ ಸಹಕಾರಿ ಸಚಿವ ಬಿಜೆ ಪುಟ್ಟಸ್ವಾಮಿ ನಡುವೆ ಜಟಾಪಟಿ ನಡೆದಿದ್ದರೆ ಕಳೆದ ಮಂಗಳವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿಯೇ ಅಬಕಾರಿ ಸಚಿವ ರೇಣುಕಾಚಾರ್ಯ ಹಾಗೂ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ನಡುವೆ  ತೀವ್ರ ಸ್ವರೂಪದ ಜಟಾಪಟಿ ನಡೆದಿದೆ.  ಈ ರೀತಿ ಆದರೆ ಮುಂದಿನ ದಿನಗಳನ್ನು ಸಚಿವ ಸಚಿವರ ನಡುವೆ ಜಟಾಪಟಿಗಳು ನಡೆಯುವುದು ಸಾಮಾನ್ಯ ಸಂಗತಿಯಾಗುವ ಸಾಧ್ಯತೆಗಳು ಈಗ ಸ್ಪಷ್ಟವಾಗಿ ಕಂಡು ಬರತೊಡಗಿವೆ.  ಹೀಗಾದರೆ ಸಚಿವರು ಸಾಮರಸ್ಯದಿಂದ ಕಾರ್ಯ ಮಾಡುವುದು ಮುಂದಿನ ದಿನಗಳಲ್ಲಿ  ಸಾಧ್ಯವಾಗಲಾರದು ಎಂಬ ಭಾವನೆಗಳು  ಉಂಟಾಗತೊಡಗಿದೆ. ಆದ್ದರಿಂದ ಸರಕಾರ ಒಂದೇ ಆಗಿದ್ದರೂ ಸಂಪುಟ ಮಾತ್ರ ಇಬ್ಬಣಗಳಲ್ಲಿ ಒಡೆದು ಹೋಗಿರುವುದು ಈಗ ಕಂಡು ಬರುತ್ತಿರುವ ಸತ್ಯ ಸಂಗತಿ ಆಗಿದೆ.  ಹೀಗಾದರೆ ಸರಕಾರ ಒಂದಾಗಿ ಕಾರ್ಯ ಮಾಡುವುದು ಕನಸ್ಸಿನ ಸಂಗತಿಯಾಗಿ ಪರಿಣಮಿಸುವುದು ಈಗ ಕಂಡು ಬರುತ್ತಿರುವ ಅಪ್ಪಟ ಸತ್ಯ ಸಂಗತಿಯಾಗಿದೆ.  ಹೀಗಾಗಿ ಸರಕಾರದ ಘನತೆ ಗೌರವಗಳು ಹಾಳಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರತೊಡಗಿವೆ

loading...

LEAVE A REPLY

Please enter your comment!
Please enter your name here