ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ

0
38

 

ಮುಂಡಗೋಡ: ಕಾನೂನು ಬಾಹಿರವಾಗಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕಾರವಾರ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳ ನೇತೃತ್ವದ ತಂಡದವರು ಶುಕ್ರವಾರ ದಾಳಿ ನಡೆಸಿ ದಂಡ ವಿಧಿಸಿ ಜಾಗೃತಿ ಮೂಡಿಸಿದರು.
ಪಟ್ಟಣದ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ಸುಮಾರು ೩೫ ಪ್ರಕರಣ ದಾಖಲಿಸಿ ಒಟ್ಟು ೩೫೧೦ರೂ. ದಂಡ ವಿಧಿಸಿದ ನಂತರ ಅಂಗಡಿ ಮಾಲಿಕರಿಗೆ ಎಚ್ಚರಿಕೆ ನೀಡಲಾಯಿತು. ದಾಳಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಿನೋದ ಭೂತೆ, ಜಿಲ್ಲಾ ಸಲಹೆಗಾರ ಪ್ರೆÃಮಕುಮಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಕೃಷ್ಣ, ಉಪ ತಹಸೀಲ್ದಾರ ವಿಜಯ ಶೆಟ್ಟೆಪ್ಪನವರ, ಡಾ. ರಂಗನಾಥ, ಡಾ. ಶಿವಲೀಲಾ, ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಸ್ ಪಟ್ಟಣಶೆಟ್ಟಿ, ಎಎಸ್‌ಐ ಕೆ.ಎನ್. ಘಟಕಾಂಬ್ಳೆ, ಪ್ರಕಾಶ ಬಿ.ಕೆ., ಎಸ್.ಎ. ಗೋಣೆಪ್ಪನವರ, ಎನ್.ಆರ್. ಕಳ್ಳಿಮನಿ, ರೂಪಾ, ಶ್ರಿÃನಿವಾಸ ಮಿಸ್ಕಿನ, ಮರಿಯಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

loading...