ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಹಾನಿಕರ: ಅಂಬಲಗಿ

0
16

ಇಂಡಿ: ಮನುಷ್ಯನು ತಮ್ಮ ಆರೋಗ್ಯವನ್ನು ತಾವೇ ಕೈಯಾರೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ಉತ್ತಮವಾದ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವಂತರಾಗಬೇಕು ಹೊರತು ತಂಬಾಕು ಸೇವೆನೆಯಿಂದ ಕ್ಯಾನ್ಸರ್ ಆಗುತ್ತದೆ ಎಂದು ತಾಲೂಕು ಆರೋಗ್ಯ ಕ್ಷೆÃತ್ರ ಶಿಕ್ಷಣಾಧಿಕಾರಿ ಶ್ರಿÃಮತಿ ಎಸ್.ಬಿ. ಅಂಬಲಗಿ ಹೇಳಿದರು.
ತಾಲೂಕಿನ ಮಿರಗಿ ಗ್ರಾಮದ ಶ್ರಿÃ ಯಲ್ಲಾಲಿಂಗೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆಯವರು ತಂಬಾಕು ರಹಿತ ದಿನಾಚರಣೆಯನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮಾಹಿತಿಯನ್ನು ತಿಳಿಸಿ ಮಾತನಾಡಿದರು.
ತಂಬಾಕು , ಗುಟಕಾ ಹಾಗೂ ಸೀಗರೇಟ ಮತ್ತು ಬೀಡಿ ಸೇದುದರಿಂದ ಜೀವಕ್ಕೆ ಬಹಳಷ್ಟು ಕುತ್ತು ಬರಲಿದೆ. ಇವುಗಳು ಹೆಚ್ಚಿಗೆ ಬಳಸುವದರಿಂದ ಗಂಟಲು ಕ್ಯಾನ್ಸರ್, ಶ್ವಾಸಕೋಶ ಕ್ಯಾನ್ಸರ್ ಹೀಗೆ ಹಲವಾರು ಬೇರೆ-ಬೇರೆ ಅಂಗಗಳಿಗೆ ಕ್ಯಾನ್ಸ್ರ ಉಂಟಾಗಲಿದೆ. ಆದ್ದರಿಂದ ಇವುಗಳು ಬಿಟ್ಟರೆ ಮಾತ್ರ ಇನ್ನಷ್ಟು ದಿನಗಳು ಬದುಕಲು ಸಾಧ್ಯವಾಗಲಿದೆ. ಒಂದು ವೇಳೆ ಈ ಚಟವನ್ನು ಬೀಡಬೇಕಾದರೆ ನಮ್ಮ ಜಿಲ್ಲಾಸ್ಪತ್ರೆಯಲ್ಲಿ ನಿಕೋಟಿನ ಚಾಕಲೇಟ್‌ನ್ನು ಕೊಡುತ್ತಾರೆ. ಅದನ್ನು ತಿನ್ನುವದರಿಂದ ನಿಧಾನವಾಗಿ ಬಿಡಲು ಸಾಧ್ಯವಾಗಲಿದೆ ಎಂದು ತಿಳಿಸಿರು.
ಶಿಕ್ಷಕರಾದ ಡಿ.ಬಿ. ಧನಶೆಟ್ಟಿ ಅಧ್ಯಕ್ಷತೆಯನ್ನುವಹಿಸಿ ಮಾತನಾಡಿ ನಾವು ದಿನನಿತ್ಯವು ಹಣವನ್ನು ಕೊಟ್ಟು ರೋಗಗಳನ್ನು ತಗೆದುಕೊಳ್ಳುತ್ತಿದ್ದೆÃವೆ. ಆದ್ದರಿಂದ ನಾವು ಆರೋಗ್ಯವಾಗಿ ಇರಬೇಕಾದರೆ ಇಂತಹ ವ್ಯಸಗಳಿಗೆ ಅಂಟುಕೊಳ್ಳದೇ ಒಳ್ಳೆಯ ಆಹಾರವನ್ನು ಸೇವನೆ ಮಾಡುವದರಿಂದ ಆರೋಗ್ಯಕರವಾಗಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸವಿತಾ ಭೈರಶೆಟ್ಟಿ, ಎಂ,ಎನ್.ಹಳ್ಳಿ, ಎಸ್.ಎಂ. ತೆನ್ನಳ್ಳಿ , ಆಶಾ ಕಾರ್ಯಕರ್ತರು ಹಾಗೂ ಶಾಲಾ ಸಿಬ್ಬಂಧಿ ವರ್ಗವದರು ಉಪಸ್ಥಿತರಿದ್ದರು.

loading...