ತಪ್ಪದೇ ಮತದಾನ ಮಾಡಿ: ನರಸಿಂಹ

0
2

ಕನ್ನಡಮ್ಮ ಸುದ್ದಿ-ಧಾರವಾಡ: ಸಾರ್ವತ್ರಿಕ ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬಗಳು. ಇವುಗಳನ್ನು ಪ್ರತಿಯೊಬ್ಬರು ಮನೆ ಹಬ್ಬದಂತೆ ಆಚರಿಸಿ ಸಂಭ್ರಮಿಸಬೇಕು. ಬರುವ ಏಪ್ರಿಲ್ ೨೩ ರಂದು ಲೋಕಸಭೆ ಚುನಾವಣೆಗೆ ಪ್ರತಿ ಮನಯ ಅರ್ಹ ಮತದಾರ ತಪ್ಪದೇ ಮತದಾನ ಮಾಡಬೇಕೆಂದು ಅಂಚೆ ಇಲಾಖೆ ಧಾರವಾಡ ವಿಭಾಗದ ಸಹಾಯಕ ಅಧೀಕ್ಷಕ ವಿಜಯ ನರಸಿಂಹ ಹೇಳಿದರು.
ಜಯನಗರ ಬಡಾವಣೆಯಲ್ಲಿ ಅಂಚೆ ಇಲಾಖೆ ಸಿಬ್ಬಂದಿ ಹಾಗೂ ಪೋಸ್ಟ್ಮನ್‌ಗಳ ಜೊತೆಗೂಡಿ ಮತದಾರರ ಮನೆಮನೆಗೆ ತೆರಳಿ ಕರಪತ್ರ ವಿತರಿಸಿ ಮಾತನಾಡಿದರು. ವಿದ್ಯಾವಂತರು, ಸುಶಿಕ್ಷಿತರು ಹೆಚ್ಚಾಗಿ ವಾಸಿಸುವ ನಗರ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆ ಆಗುತ್ತಿದೆ. ಉದಾಸೀನತೆ ಬಿಟ್ಟು ಪ್ರತಿಯೊಬ್ಬರು ತಮ್ಮ ಮನೆಯ ಸದಸ್ಯರು, ನೆರೆಹೊರೆಯವರು ಮತ್ತು ಬಂಧು ಬಳಗದವರು ತಪ್ಪದೇ ಮತದಾನ ಮಾಡಿ ಸುಭದ್ರ ಸರ್ಕಾರ ರಚಿಸಲು ತಮ್ಮ ಮತದಾನ ಕೊಡುಗೆ ನೀಡಬೇಕೆಂದು ಹೇಳಿದರು. ಜಿಲ್ಲಾ ಸ್ವಿÃಪ್ ಸಮಿತಿ ಅಧ್ಯಕ್ಷ ಜಿಲ್ಲಾ ಪಂಚಾಯತ್ ಕಾರ್ಯನಿವಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್ ಮಾತನಾಡಿ, ಧಾರವಾಡ ಲೋಕಸಭಾ ಮತಕ್ಷೆÃತ್ರ ವ್ಯಾಪ್ತಿಯಲ್ಲಿ ಅಂಚೆಯಣ್ಣನ ಮೂಲಕ ಮನೆಮನೆಗೆ ಮತದಾರ ಜಾಗೃತಿ ಸಂದೇಶ ತಲುಪಿಸುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲೆಯ ೨೦ ಮತಗಟೆಗಳಲ್ಲಿ ಕಳೆದ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗಿದೆ. ಅಂತಹ ಪ್ರದೇಶಗಳನ್ನು ಗಮನದಲ್ಲಿಟ್ಟು ಅಂಚೆಯಣ್ಣರಿಗೆ ಮತದಾನ ಮಾಹಿತಿಯುಳ್ಳ ಕರಪತ್ರಗಳನ್ನು ನೀಡಿ ಮನೆಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಜಾಗೃತಿ ನೀಡಲು ನಿಯೋಜಿಸಲಾಗಿದೆ ಎಂದರು. ಅಂಚೆ ಇಲಾಖೆ ಮಾರುಕಟ್ಟೆ ಅಧಿಕಾರಿ ಡಿ.ವಿ. ಉಳ್ಳಿಕಾಶಿ, ಅಂಚೆಯಣ್ಣಂದಿರಾದ ದೀಪಕ ಸಾಳುಂಕೆ, ಸುರೇಶ್ ಸಾತನೂರ ಮತ್ತು ಪರಮೇಶ್ವರ ಬೆಳವಡಿ ಇದ್ದರು.

loading...