ತಮದಡ್ಡಿಯಲ್ಲಿ ಮೊಸಳೆ ಸೆರೆ

0
4

ಕನ್ನಡಮ್ಮ ಸುದ್ದಿ-ತೇರದಾಳ: ಸಮೀಪದ ಕೃಷ್ಣಾ ನದಿ ತೀರದ ತಮದಡ್ಡಿ ಗ್ರಾಮದ ಹಳಿಂಗಳಿ ರಸ್ತೆಯ ಜಮೀನಿನೊಂದರಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಗ್ರಾಮದ ಯುವ ಮುಖಂಡರಾದ ಮಹಾವೀರ ಬಿಲವಡಿ, ಜಗದೀಶ ಝಾರಿ, ಆಧಿನಾಥ ಶಿರಹಟ್ಟಿ, ಬಾಹುಬಲಿ ಶಿರಹಟ್ಟಿ ಹಾಗೂ ಆಧಿನಾಥ ಕುಳ್ಳಿ ಹಿಡಿದು ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದರು.
ಈ ಹಿಂದೆ ಹಳಿಂಗಳಿಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಕೆಲ ದಿನಗಳ ಹಿಂದೆಯೇ ಅಲ್ಲಿನವರು ಸೆರೆಹಿಡಿದ ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಈಗ ತಮದಡ್ಡಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು ನದಿಪಾತ್ರಗಳ ಗ್ರಾಮಸ್ಥರಲ್ಲಿ ಅತಂಕ ಮನೆಮಾಡಿದೆ.

ಸಂಬಂಧಿಸಿದ ಇಲಾಖೆಯವರು ಗ್ರಾಮಸ್ಥರ ಸಂಕಟವನ್ನು ದೂರಮಾಡುವ ಭರವಸೆಯನ್ನು ಕೊಡಬೇಕೆಂಬುದು ಇಲ್ಲಿನವರ ಆಶಯವಾಗಿದೆ.

loading...