ತಮಿಳುನಾಡಿನಲ್ಲಿ ಪ್ರತ್ಯೇಕ ಅಪಘಾತ: 12 ಮಂದಿ ಸಾವು

0
1

ಚೆನ್ನೈ, – ತಮಿಳುನಾಡಿನಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 12 ಜನ ಮೃತಪಟ್ಟಿದ್ದು ಇತರೆ 14 ಮಂದಿ ಗಾಯಗೊಂಡಿದ್ದಾರೆ.
ಕಳದೆ ರಾತ್ರಿ ಮಧುರೈನ ವಾಡಿಪಟ್ಟಿ ಬಳಿ ಎರಡು ಕಾರು ಮತ್ತು ದ್ವಿಚಕ್ರ ವಾಹನಗಳ  ನಡುವೆ ಡಿಕ್ಕಿ ಹೊಡೆದ ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ.  ವಿಲ್ಲುಪುರಂಜಿಲ್ಲೆಯ ಸೇತುವೆಯಿಂದ,ಕಾರು ಬಿದ್ದು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೂರನೇ ಅಪಘಾತ ಅರಿಯಲೂರು ಜಿಲ್ಲೆಯಲ್ಲಿ ಸಂಭವಿಸಿದ್ದು, ಇದರಲ್ಲಿ  ಮೂವರು ಸಾವನ್ನಪ್ಪಿದ್ದು ಮತ್ತು ಇತರೆ ನಾಲ್ವರು ಗಾಯಗೊಂಡಿದ್ದಾರೆ.
ಮಧುರೈನ ವರದಿಯ ಪ್ರಕಾರ, ಮೃತರು ಕೇರಳದ ಮಲಪ್ಪುರಂ ಮತ್ತು ಆಂಧ್ರಪ್ರದೇಶದ ಇಂದಿರಾಪುರಂ ಮೂಲದವರಾಗಿದ್ದು ಇದರಲ್ಲಿ ಒಬ್ಬ ಬೈಕಿನ ಪಿಲಿಯನ್ ರೈಡರ್ ಸಹ ಸೇರಿದ್ದಾನೆ
ಆಂಧ್ರಪ್ರದೇಶದ ಕುಟುಂಬ ಮಧುರೈನ ಪಳನಿಯ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

loading...