ತರಕಾರಿ ಹೆಸರಿನಲ್ಲಿ ಹೊರ ಬರುತ್ತಿರುವ ಜನರ ನಿಯಂತ್ರಣಕ್ಕೆ ಚಿಕ್ಕೋಡಿ ಪೋಲಿಸರಿಂದ ಹೊಸ ಪ್ಲ್ಯಾನ: ಸಾರ್ವಜನಿಕರಿಂದ ಪ್ರಶಂಸೆ

0
22

ತರಕಾರಿ ಹೆಸರಿನಲ್ಲಿ ಹೊರ ಬರುತ್ತಿರುವ ಜನರ ನಿಯಂತ್ರಣಕ್ಕೆ ಚಿಕ್ಕೋಡಿ ಪೋಲಿಸರಿಂದ ಹೊಸ ಪ್ಲ್ಯಾನ: ಸಾರ್ವಜನಿಕರಿಂದ ಪ್ರಶಂಸೆ

ಕನ್ನಡಮ್ಮ ಸುದ್ದಿ

ಚಿಕ್ಕೋಡಿ : ಕೊರೋನಾ ಭೀತಿ ಹಿನ್ನೆಲೆ ಭಾರತ ಲಾಕ ಡೌನ, ತರಕಾರಿ ಖರೀದಿ‌ ಹೆಸರಲ್ಲಿ ಮನೆಯಿಂದ ಹೊರ ಬರುತ್ತಿರುವ ಜನರು. ಮನೆಯಿಂದ ಬರದಂತೆ ಚಿಕ್ಕೋಡಿ ಪೊಲೀಸರ ಹೊಸ ಪ್ಲಾನ ರೂಪಿಸಿದ್ದಾರೆ .

ಚಿಕ್ಕೋಡಿ ಪಟ್ಟಣದಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಮನೆಯಿಂದ ಹೊರಗಡೆ ಬಾರದಂತೆ ಸರ್ಕಾರ ಆದೇಶ ನೀಡಿದ ಹಿನ್ನಲೆಯಲ್ಲಿ ಮನೆಗಳಿಗೆ ತರಕಾರಿ ತಲುಪಿಸಲು ಮುಂದಾದ ಚಿಕ್ಕೋಡಿ ಪೊಲೀಸರು. ತರಕಾರಿ‌ ಮಾರಾಟಗಾರರು ಮನೆ ಮನೆಗೆ ಹೋಗಿ ಮಾರಾಟ ಮಾಡಲು ಅವಕಾಶ‌ ನೀಡಿದ್ದು ಬೆಳಿಗ್ಗೆ ೭ ರಿಂದ ೯ ಹಾಗೂ ಸಂಜೆ ೪ ರಿಂದ ೭ ಗಂಟೆ ವರೆಗೆ ಮನೆ ಮನೆಗಳಿಗೆ ಹೋಗಿ ತರಕಾರಿ ಮಾರಾಟ. ಮಾರಾಟಗಾರರಿಗೆ ಒಂದೊಂದು ಏರಿಯಾ ನಿಗದಿ ಮಾಡಿದ್ದು, ಆ ಎರಿಯಾಗಳಿಗೆ ಹೋಗಿ ನಿಗದಿ ಪಡಿಸಿದ ಸಮಯದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ.

ತರಕಾರಿ ಹೆಸರಲ್ಲಿ ಜನ ಗುಂಪು ಗುಂಪಾಗಿ ನಿಲ್ಲುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಪೊಲೀಸರ ಹೊಸ ಪ್ಲಾನ ಇದು ಇಂದು ಸಾಯಂಕಾಲದಿಂದ ಪ್ಲಾನ‌ ಅನುಷ್ಟಾನಕ್ಕೆ ತಯಾರಿ ನಡೆಸಿದ್ದ ಚಿಕ್ಕೋಡಿ ಅಧಿಕಾರಿಗಳು.

loading...