ತಹಶಿಲ್ದಾರರ ಕಾರು ಚಾಲಕನ ಮೇಲೆ ಟ್ರಾಕ್ಟರ್ ಹಾಯಿಸಿದ ಪ್ರಕರಣ : ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸರು

0
10

ತಹಶಿಲ್ದಾರರ ಕಾರು ಚಾಲಕನ ಮೇಲೆ ಟ್ರಾಕ್ಟರ್ ಹಾಯಿಸಿದ ಪ್ರಕರಣ : ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸರು

ಕನ್ನಡಮ್ಮಸುದ್ದಿ -ಚಿಕ್ಕೋಡಿ -ಲಾಕ್ ಡೌನ ನಡುವೇಯು ಅಕ್ರಮ ಮರಳು ಗಣಿಗಾರಿಕೆ ತಡೆಯಲು ಬಂದ ತಹಸೀಲ್ದಾರ್ ದಾಳಿ ವೇಳೆ  ಚಾಲಕನ ಮೇಲೆ ಟ್ರಾಕ್ಟರ್ ಹಾಯಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿತರನ್ನು ಬಂಧಿಸುವಲ್ಲಿ ಜಿಲ್ಲೆಯ  ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಮೂರು ದಿನದ ಹಿಂದೆ ಜಿಲ್ಲೆಯ ಅಥಣಿ ತಾಲೂಕಿನ ಶಿರೂರ -ಖಿಳೆಗಾಂವ ಮಧ್ಯದ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆ
ಮಾಡುತ್ತಿದ್ದಾಗ ಅಥಣಿ ತಹಸೀಲ್ದಾರ್ ಮತ್ತು ಅವರ ಚಾಲಕ ಅನಿಲ್ ಮಲ್ಲಪ್ಪ ಗಸ್ತಿ ಹಾಗೂ ಆರ್.ವಿ. ಖಲಾಟೆ ಅವರೊಂದಿಗೆ ದಾಳಿ ಕೈಗೊಂಡಿದ್ದರು ‌ ಈ ವೇಳೆ  ತಹಸೀಲ್ದಾರ್ ಮತ್ತು ಅವರ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಒತ್ತಾಯಪೂರ್ವಕವಾಗಿ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೊರಟಾಗ ಟ್ರಾಕ್ಟರ್‌ಗೆ ಅಡ್ಡಗಟ್ಟಿದ ತಹಸೀಲ್ದಾರ್  ಕಾರು ಚಾಲಕ ಅನಿಲ್ ಗಸ್ತಿ ಇವರ ಮೇಲೆ ಟ್ರಾಕ್ಟರ್ ಹಾಯಿಸಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ಭಾಗಿಯಾದ ಆರೋಪಿತರಾದ  ಸಾಗರ್ ಮಾರುತಿ ತಂದೆ ಶ್ರೀರಂಗ ಕೋಳಿ ಗಣಪತಿ ಚನ್ನಪ್ಪ ಮಾನೆ ನಾರಾಯಣ ಬಾಪು ಹೊನಮೋಲೆ  ಪ್ರಕಾಶ ಲಕ್ಷಣ ಹೊನಮೋರೆ, ಎಲ್ಲರನ್ನೂ ಬಂಧಿಸಿ  ನ್ಯಾಯಾಲಯದ ಮುಂದೆ ಹಾಜರಪಡಿಸಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

loading...