ತಾಪಂ ಪಕ್ಷೇತರ ಸದಸ್ಯ ಬಿಜೆಪಿಗೆ ಸೇರ್ಪಡೆ

0
35

ಸವದತ್ತಿ 15: ತಾಲೂಕಿನ ಹೂಲಿಕಟ್ಟಿ ಗ್ರಾಮದ ಪಕ್ಷೇತರ ಸದಸ್ಯ ಬಸಪ್ಪ ಗುಡ್ಡನಾಯ್ಕರ ತನ್ನ ಬೆಂಬಲಿಗರೊಂದಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾರುತಿ ಗುಡ್ಡನಾಯ್ಕರ, ಬೊರಸಾಬ ಮಿಶ್ರಿಕೋಟಿ, ಶಿವಪ್ಪ ಗೋಪಾಳಿ, ಮೈಲಾರ ಗುಡ್ಡನಾಯ್ಕರ, ಮಂಜುನಾಥ ಹೊಸಮನಿ, ಮಾಬುಲಿ ಮಿಶ್ರಿಕೋಟಿ, ಮಲ್ಲಪ್ಪ ಗುಡ್ಡನಾಯ್ಕರ ಮಾರುತಿ ಕುರಬಗಟ್ಟಿ, ಕಳಸಪ್ಪ ತಳವಾರ(ಗೊರಾಬಾಳ), ಮಾರುತಿ ಪಾಟೀಲ ಹಾಗೂ ಸಿದ್ದಪ್ಪ ಉಣ್ಣಿ ಸೇರಿದಂತೆ ಹಲವಾರು ಬೆಂಬಲಿಗರೊಂದಿ ಬಸಪ್ಪ ಗುಡ್ಡನಾಯ್ಕರ ಬಿಜೆಪಿಗೆ ಸೇರಿದರು.
ಶಾಸಕ ಆನಂದ ಮಾಮನಿ ತಮ್ಮ ಕಛೇರಿಯಲ್ಲಿ ಬಸಪ್ಪ ಗುಡ್ಡನಾಯ್ಕರ ಜೊತೆಗೆ ಆಗಮಿಸಿ ಸೇರ್ಪಡೆಗೊಂಡವರನ್ನು ಬಿಜೆಪಿ ರುಮಾಲು ಹೊದಿಸಿ ಬರಮಾಡಿಕೊಂಡರು. ಈ ವೇಳೆ ಬಿಜೆಪಿಯ ಮುರಳಿಧರ ಹುರಳಿ, ಮಲ್ಲಿಕಾರ್ಜುನ ವಾಂಗಿ, ಕಾಶಪ್ಪ ಗೋವನ್ನವರ ಹಾಗೂ ಜಗದೀಶ ಕೌಜಗೇರಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here