ತಾಲೂಕು ಕಚೇರಿಗಳನ್ನು ಶೀಘ್ರವಾಗಿ ಪ್ರಾರಂಭಿಸಲಾಗುವುದು: ಡಿಸಿ ಎಸ್.ಬಿ.ಶೆಟ್ಟಣ್ಣವರ

0
4

ತಾಳಿಕೋಟೆ: ಪಟ್ಟಣದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ ಕಚೇರಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುತ್ತಿದ್ದು, ಎಲ್ಲ ಇಲಾಖೆಯ ತಾಲೂಕು ಕಚೇರಿಗಳನ್ನು ಶೀಘ್ರವಾಗಿ ಪ್ರಾರಂಭಿಸಲು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣವರ ಹೇಳಿದರು.
ಅವರು ಪಟ್ಟಣದ ತಹಶಿಲ್ದಾರ ಕಚೇರಿಗೆ ಭೇಟಿ ನೀಡಿ ನಂತರ ಪರ್ತಕರ್ತರೊಂದಿಗೆ ಮಾತನಾಡಿದರು. ತಾಳಿಕೋಟೆ ನೂತನ ತಾಲೂಕು ಕೇಂದ್ರವಾಗಿದೆ. ತಾಲೂಕು ಕಚೇರಿ ತೆಗೆಯಲು ಸರ್ಕಾರ ೧೦ ಲಕ್ಷ ನೀಡಲಾಗಿದೆ. ತಹಶೀಲ್ದಾರ ಕಚೇರಿ ಪೂರ್ಣ ಪ್ರಮಾಣದಲ್ಲಿ ಎಲ್ಲ ಸಿಬ್ಬಂದಿಯೊಂದಿಗೆ ಕಾರ್ಯಾರಂಭ ಮಾಡುತ್ತಿದೆ. ತಾತ್ಕಾಲಿಕವಾಗಿ ಶಾಲಾ ಕಟ್ಟಡಗಳನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. ಮಿನಿ ವಿಧಾನ ಸೌಧ ನಿರ್ಮಾಣಕ್ಕಾಗಿ ಈಗಾಗಲೇ ಜಾಗವನ್ನು ಗುರುತಿಸಿ ಸರ್ಕಾರದ ಅನುಮತಿಗಾಗಿ ಕಳುಹಿಸಿ ಕೊಡಲಾಗಿದೆ. ಎಲ್ಲ ಇಲಾಖೆಗಳ ತಾಲೂಕು ಕಚೇರಿಗಳು ಆರಂಭಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ಅವುಗಳು ಕೂಡಾ ಶೀಘ್ರವಾಗಿ ಆರಂಭಿಸಲಾಗುವದು ಎಂದರು.

ಪುರಸಭೆಗೆ ಸಿಬ್ಬಂದಿಗಳ ನಿಯೋಜನೆ ಮತಗಟ್ಟೆ ಪರಿಶೀಲನೆಗೆ ಆಗಮಿಸಿದ ಜಿಲ್ಲಾಧಿಕಾರಿ ಎಸ್.ಬಿ.ಶೇಟ್ಟಣ್ಣವರ ಪುರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ ಅಧಿಕಾರಿಗಳ ಕೊರತೆ ಕುರಿತು ಮುಖ್ಯಾಧಿಕಾರಿ ಸುರೇಶ ನಾಯಕ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ತಹಶಿಲ್ದಾರ ನಿಂಗಪ್ಪ ಬಿರಾದಾರ, ಕಂದಯ ನೀರಿಕ್ಷಕ ಅನೀಲಕ ಚವ್ಹಾಣ, ಗ್ರಾಮಲೆಕ್ಕಾಧಿಕಾರಿಗಳಾದ ಜಗದೀಶ ಹಂಗರಗಿ, ಮಶ್ಯಾಕ ಭಂಟನೂರ, ಜಯರಾಮ ಚವ್ಹಾಣ, ಸದಾಶಿವ ಮಾದರ, ಮಲ್ಲಿಕಾರ್ಜುನ ನಾಯ್ಕೊÃಡಿ ಸೇರಿದಂತೆ ಇತರರು ಇದ್ದರು.

loading...