ತುಂಗಭದ್ರಾ ಜಲಾಶಯ ಒಡೆದಿಲ್ಲ: ಜಿಲ್ಲಾಧಿಕಾರಿ ಸುನೀಲ್‌ಕುಮಾರ್ ಸ್ಪಷ್ಟನೆ

0
3

ಕೊಪ್ಪಳ:-ತುಂಗಭದ್ರಾ ಜಲಾಶಯ ಒಡೆದಿಲ್ಲ. ಗ್ರಾಮಸ್ಥರು ಆತಂಕಪಡುವ ಅಗತ್ಯವಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ ಒಡೆದಿಲ್ಲ. ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಒಡೆದಿದ್ದರಿಂದ ಅಲ್ಪ ಪ್ರಮಾಣದ ನೀರು ಪೋಲಾಗುತ್ತಿದೆ. ಪಂಪಾವನ ಜಲಾಶಯದ ಪಕ್ಕದಲ್ಲಿರುವುದರಿಂದ ಜಲಾವೃತಗೊಂಡಿದೆ. ಜಲಾಶಯದ ಎಂಜನಿಯರ್ ಅದನ್ನು ಸರಿಪಡಿಸುತ್ತಾರೆ ಎಂದರು.
ಜಲಾಶಯ ಒಡೆದಿದೆ ಎನ್ನುವುದು ಶುದ್ಧ ಸುಳ್ಳು. ಈ ಬಗ್ಗೆ ಜನರು ಆತಂಕಕ್ಕೊಳಗಾಗಬಾರದು.
ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈಗಾಗಲೇ ಡಂಗೂರ ಸಾರಿ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಜಲಾಶಯ ಒಡೆದಿದೆ ಎಂಬ ವದಂತಿಯೊಂದು ಹಬ್ಬಿದ ಹಿನ್ನೆಲೆಯಲ್ಲಿ ನದಿ ತೀರದ ಬಂಡಿಹರ್ಲಾಪುರ, ಸಣಾಪುರ, ಹನುಮನಹಳ್ಳಿ, ಅಗಳಕೇರ, ಶಿವಪುರ ಗ್ರಾಮಸ್ಥರು ಆತಂಕ್ಕೀಡಾಗಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಖಾಸಗಿ ಶಾಲಾ- ಕಾಲೇಜುಗಳಿಗೆ ದಿಢೀರ್ ರಜೆ ಘೋಷಿಸಲಾಗಿತ್ತು.

loading...