ತೇರದಾಳ: ನೂತನ ತಹಶೀಲ್ದಾರ ಅಧಿಕಾರ ಸ್ವಿÃಕಾರ

0
27

ಕನ್ನಡಮ್ಮ ಸುದ್ದಿ-ತೇರದಾಳ: ನಗರದ ವಿಶೇಷ (ಗ್ರೆÃಡ್ ೧) ತಹಶೀಲ್ದಾರ್ ಆಗಿ ನೇಮಕಗೊಂಡಿರುವ ಮೆಹಬೂಬಿ ಬುಧವಾರ ಅಧಿಕಾರ ಸ್ವಿÃಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಪ್ರೊ. ಬಸವರಾಜ ಕೊಣ್ಣೂರ, ತೇರದಾಳ ಜನತೆಯ ೪೮ ವರ್ಷಗಳ ಬೇಡಿಕೆಯಾದ ತಾಲೂಕುವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಮಾದರಿ ತಾಲೂಕು ಮಾಡುವ ಕನಸು ಹೊಂದಿದ್ದು, ಮುಂಬರುವ ದಿನಗಳಲ್ಲಿ ನೂತನ ತಾಲೂಕಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಅಧಿಕಾರ ಸ್ವಿÃಕರಿಸಿ ಜನತೆಯಿಂದ ಸನ್ಮಾನ ಸ್ವಿÃಕರಿಸಿ ಮಾತನಾಡಿದ ವಿ. ತಹಶೀಲ್ದಾರ್ ಮೆಹಬೂಬಿ, ತಮ್ಮ ಅಧಿಕಾರವಧಿಯಲ್ಲಿ ಪ್ರತಿಯೊಬ್ಬರ ಸಮಸ್ಯೆಗಳಿಗೆ ಸ್ಪಂಧಿಸುವ ಪ್ರಾಮಾಣಿಕ ಕೆಲಸ ಮಾಡುತ್ತೆÃನೆ. ನಾನು ಶಿಕ್ಷಣ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡಿದ್ದರಿಂದ ಆಡಳಿತದ ಬಗ್ಗೆ ಅನುಭವ ಇದೆ. ನೂತನ ತಾಲೂಕುವನ್ನು ಮಾದರಿ ತಾಲೂಕುವನ್ನಾಗಿ ಮಾಡಲು ಎಲ್ಲರೂ ಕೈ ಜೋಡಿಸಬೇಕೆಂದು ಹೇಳಿದರು.
ಸಮಿತಿ ಅಧ್ಯಕ್ಷ ಭುಜಬಲಿ ಕೆಂಗಾಲಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಮಾತನಾಡಿದರು. ಸಮಿತಿಯವರು, ವಿವಿಧ ಸಂಘಟನೆಯವರು, ಮಹಿಳೆಯರು, ಅಲ್ಪಸಂಖ್ಯಾತ ಅವರನ್ನು ಸನ್ಮಾನಿಸಿದರು.

ಸ್ಥಳೀಯ ಠಾಣಾಧಿಕಾರಿ ಕೆ.ಟಿ. ಶೋಭಾ, ಉಪನೋಂದಣಾಧಿಕಾರಿ ಎಸ್.ಪಿ. ದಾಮಾ, ಶೀರಸ್ತೆದಾರ ಎಸ್.ಬಿ. ಕಾಂಬಳೆ, ಹಿರಿಯರಾದ ಎಸ್.ಪಿ. ಮಗದುಂ ಸೇರಿದಂತೆ ಜನಪ್ರತಿನಿಧಿಗಳು, ಮುಖಂಡರು, ಸಮಿತಿಯವರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

loading...