ತ್ರಿದಳ ಕೃತಿ ಸಮಾಜಕ್ಕೆ ಒಳ್ಳೆಯ ಸಂದೇಶ: ಬಾಳೇಕುಂದ್ರಿ

0
7

ಬೆಳಗಾವಿ: ರಾಜಕೀಯ ಸಮಾಜ ಹಾಳು ಮಾಡುತ್ತಿರುವ ಇಂದಿನ ದಿನಗಳಲ್ಲಿ ವಾಸಂತಿ ಮೇಳೇದ ಅವರ ತ್ರಿದಳ ಕೃತಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹದಾಗಿದೆ ಎಂದು ಅಂತಾರಾಷ್ಟ್ರೀಯ ಹೃದಯ ತಜ್ಞೆ ಸಾಹಿತಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘ ಮತ್ತು ಮೇಳೇದ ಪ್ರಕಾಶನ ವತಿಯಿಂದ ಸಾಹಿತಿ ವಾಸಂತಿ ಮೇಳೇದ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಾಸಂತಿ ಮೇಳೇದ ಅವರ ತ್ರಿದಳ, ಸೆರಗಿನ ಸಿರಿ ಮತ್ತು ಚಿಲಿ ಪಿಲಿ ಎಂಬ ಕೃತಿಗಳನ್ನು ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಮತ್ತು ನೀಲಗಂಗಾ ಚರಂತಿಮಠ ಅವರು ಲೋಕಾರ್ಪಣೆಗೊಳಿಸಿದರು.
ಈ ವೇಳೆ ಮಾತನಾಡಿದ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಜ್ಞಾನ ವಿಜ್ಞಾನ ,ತತ್ವಜ್ಞಾನ À ಈ ಮೂರು ವಿಚಾರಗಳನ್ನು ಮೇಳೈಸಿಕೊಂಡಿರುವ ವಾಸಂತಿ ಮೇಳೇದ ಅವರ ತ್ರಿದಳ ತ್ರಿಪದಿ ಸಂಕಲನವು ಅತ್ಯಂತ ಅರ್ಥಗರ್ಭಿತವಾಗಿದೆ. ಅದೇ ರೀತಿ ಅವರ ಇನ್ನುಳಿದ ಸೆರಗಿನ ಸಿರಿ ಮತ್ತು ಚಿಲಿಪಿಲಿ ಕೃತಿಗಳು ಕೂಡ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹವು ಇಂತಹ ಸಾಹಿತ್ಯ ರಚಿಸಿರುವ ಮೇಳೇದ ಅವರ ಸಾಹಿತ್ಯ ಕೃಷಿ ಅನನ್ಯವಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಜ್ಯೋತಿ ಬದಾಮಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಗುರುದೇವಿ ಹುಲೇಪ್ಪನವರಮಠ, ಡಾ.ಮೈತ್ರಿಯಿಣಿ ಗದಿಗೆಪ್ಪಗೌಡ್ರ, ನೀಲಗಂಗಾ ಚರಂತಿಮಠ, ಆಶಾ ಯಮಕನಮರಡಿ ಸೇರಿದಂತೆ ಇನ್ನು ಹಲವು ಗಣ್ಯರು ಸಾಹಿತಿಗಳು ಉಪಸ್ಥಿತರಿದ್ದರು. ಸಾಹಿತಿ ಸುನಂದಾ ಎಮ್ಮಿ ಅವರು ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ನಿರ್ಮಲಾ ಭಟ್ಟಲ ಸ್ವಾಗತಿಸಿದರು, ಡಾ.ವಿಜಯಾ ಪುಟ್ಟಿ ನಿರೂಪಿಸಿದರು, ಸುಮಾ ಕಿತ್ತೂರ ವಂದಿಸಿದರು.

loading...