ಥಾಯ್ಲೆಂಡ್‌ ಓಪನ್‌: ಅರ್ಹತಾ ಸುತ್ತಿನಲ್ಲಿ ಗೆದ್ದ ಸೌರಭ್‌ ವರ್ಮಾ, ಜಯರಾಮ್‌ಗೆ ನಿರಾಸೆ

0
6

ನವದೆಹಲಿ:-ಭಾರತದ ಸೌರಭ್‌ ವರ್ಮಾ ಅವರು ಥಾಯ್ಲೆಂಡ್‌ ಓಪನ್‌ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಆದರೆ, ಭಾರತದ ಮತ್ತೊಬ್ಬ ಆಟಗಾರ ಅಜಯ್‌ ಜಯರಾಮ್‌ ಅವರು ಸೋಲು ಅನುಭವಿಸಿದರು.

ಅತ್ಯುತ್ತಮ ಪ್ರದರ್ಶನ ತೋರಿದ ಸೌರಭ್‌ ವರ್ಮಾ ಅವರು ಥಾಯ್ಲೆಂಡ್‌ನ ಕಾಂತಾವತ್ ಲೀಲಾವೆಚಬುತ್ರ್ ಅವರ ವಿರುದ್ಧ 21-18, 21-19 ನೇರ ಸೆಟ್‌ಗಳ ಅಂತರದಲ್ಲಿ ಗೆದ್ದು ಎರಡನೇ ಅರ್ಹತಾ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಮತ್ತೊಂದು ಅರ್ಹತಾ ಸುತ್ತಿನ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಭಾರತದ ಅಜಯ್‌ ಜಯರಾಮ್‌ ಅವರು 16-21, 13-21 ಅಂತರದಲ್ಲಿ ಚೀನಾದ ಝೌ ಜೀ ಕಿ ಅವರ ವಿರುದ್ಧ ಮುಗ್ಗರಿಸಿದರು.

ಸೌರಭ್‌ ವರ್ಮಾ ಅವರು ಪ್ರಧಾನ ಸುತ್ತಿನ ಪೈಪೋಟಿಯಲ್ಲಿ ಝೌ ವಿರುದ್ಧ ಸೆಣಸಲಿದ್ದಾರೆ. ಭಾರತದ ಪಿ.ವಿ ಸಿಂಧು ಅವರು ಥಾಯ್ಲೆಂಡ್‌ ಓಪನ್‌ನಿಂದ ವಿಥ್‌ ಡ್ರಾ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ಆರಂಭವಾಗುವ ವಿಶ್ವ ಚಾಂಪಿಯನ್‌ಶಿಪ್‌ಗೆ ಸಿದ್ಧತೆ ನಡೆಸಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೀಗ , ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದಿಂದ ಸೈನಾ ನೆಹ್ವಾಲ್‌ ಅವರೊಬ್ಬರು ಮಾತ್ರ ಸ್ಪರ್ಧೆಗೆ ಇಳಿಯಲಿದ್ದಾರೆ.

loading...