ದಂಪತಿಗಳು ಬೆಂಕಿಗಾಹುತಿ

0
26

ಬೆಂಗಳೂರು,29 : ಕೂಲಿ ಕೆಲಸ ಹುಡುಕಿಕೊಂಡು ನಗರಕ್ಕೆ ಆಗಮಿಸಿದ್ದ ಒಡಿಶಾ ಮೂಲದ ದಂಪತಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾಲಹಳ್ಳಿ ಸಮೀಪದ ರಾಮಬೋವಿ ಕಾಲೊನಿಂುುಲ್ಲಿ ಮಂಗಳವಾರ ಸಂಜೆ ದಂಪತಿಗಳ ಶವ ಪತ್ತೆಂುುಾಗಿದೆ. ದಂಪತಿಗಳು ತಾವು ವಾಸಿಸುತ್ತಿದ್ದ ಶೆಡ್ ನಲ್ಲಿಂುೆು ಬೆಂಕಿ ಹಚ್ಚಿಕೊಂಡಿದ್ದಾರೆ. ಮೃತರನ್ನು ಬಾಬು ಜಾನ್ (25) ಹಾಗೂ ಭಂುುಾನಿ ಜಾನ್ (22) ಎಂದು ಗುರುತಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಸಹ ಕಾರ್ಮಿಕರು ಶೆಡ್ ಗೆ ಆಗಮಿಸಿದ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ದಂಪತಿಗಳು ಕೆಲವು ದಿನಗಳ ಹಿಂದೆಂುುಷ್ಟೇ ವಿವಾಹವಾಗಿದ್ದರು. ಎರಡು ದಿನಗಳ ಹಿಂದೆ ಎಂಟು ಜನರೊಂದಿಗೆ ಒಡಿಶಾದಿಂದ ಕೆಲಸ ಹುಡುಕಿಕೊಂಡು ನಗರಕ್ಕೆ ಆಗಮಿಸಿದ್ದರು ಎಂದು ಸಹ ಕಾರ್ಮಿಕರು ತಿಳಿಸಿದ್ದಾರೆ. ರಾಮಬೋವಿ ಕಾಲೊನಿ ಬಳಿ ನೀರಿನ ಟ್ಯಾಂಕರ್ ನಿರ್ಮಾಣ ಕಾಮಗಾರಿ ನಡೆಂುುುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದರು. ಕಾಮಗಾರಿ ನಡೆಂುುುತ್ತಿದ್ದ ಸಮೀಪದ ಶೆಡ್ ನಲ್ಲಿ ವಾಸಿಸುತ್ತಿದ್ದರು. ಘಟನೆಗೆ ನಿಖರವಾದ ಕಾರಣ ಏನೆಂದು ತಿಳಿದು ಬಂದಿಲ್ಲ. ಆನಾರೋಗ್ಯದ ನೆಪವೊಡ್ಡಿ ಮಾಲೀಕನಿಂದ 500 ರೂ. ಪಡೆದು ಮಂಗಳವಾರ ಕೆಲಸಕ್ಕೆ ತೆರಳದೇ ದಂಪತಿ ಶೆಡ್ ನಲ್ಲಿ ಉಳಿದಿದ್ದರು. ಮಧ್ಯಾಹ್ನದ ವೇಳೆಗೆ ಬೆಂಕಿ ಹಚ್ಚಿಕೊಂಡಿದ್ದಾರೆ. ಶೆಡ್ ನಲ್ಲಿ ಹೊಗೆ ಬರುವುದನ್ನು ಗಮನಿಸಿ ಸಹ ಕಾರ್ಮಿಕರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಅವರು ಸುಟ್ಟು ಕರಕಲಾಗಿದ್ದರು. ಪೋಷಕರ ವಿರೋದದ ನಡುವೆಂುೆು ಇವರು ವಿವಾಹವಾಗಿದ್ದರು ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಹ ಕಾರ್ಮಿಕರು ಪೊಲೀಸರಿಗೆ ತಿಳಿಸಿದ್ದಾರೆ. ಜಾಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here