ದರ್ಶನ್ ಟ್ರೌಪಿ 2013 ಫುಟ್ಬಾಲ್ ಟೂರ್ನಾಮಿಂಟ್

0
36

ಅಮೃತ, ಬೇನೆನಸ್ಮೀತ, ಹೇರವಾಡಕರ ತಂಡಗಳ ಜಯ

ೆಳಗಾವಿ : ದರ್ಶನ ಟ್ರೌಪಿಗಾಗಿ ಇಲ್ಲಿನ

ಲೀಲೆ ಮೈದಾನದ ಮೇಲೆ ನಡೆಯುತ್ತಿರುವ ಅಂತರ

ಶಾಲಾ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕು

ಪಂದ್ಯಗಳು ಜರುಗಿ, ಅಮೃತ ವಿದ್ಯಾಲಯ ಹಾಗೂ

ಬೇನೆನಸ್ಮೀತ ಮತ್ತು ಹೇರವಾಡಕರ ತಂಡಗಳು

ಜಯ ಸಾಧಿಸಿ ಸಂಜೆ ನಡೆದ ಕೊನೆಯ ಪಂದ್ಯದಲ್ಲಿ

ಇಸ್ಲಾಮಿಯಾ ಮತ್ತು ಲವ್ ಡಾಲ್ ತಂಡದ ನಡುವೆ

ತುರಿಸಿನ ಪಂದ್ಯ ನಡೆದು ಎರಡೂ ತಂಡಗಳು ತಲಾ

ಸಮನಾಗಿಸಿಕೊಂಡವೆ.

ಮೊದಲ ಪಂದ್ಯದಲ್ಲಿ ಸೇಂಟ ಮೇರಿ ಹಾಗೂ

ಅಮೃತ ವಿದ್ಯಾಲಯ ತಂಡಗಳ ನಡುವೆ ನಡೆದು

3-2 ಗೋಲಿನ ಅಂತರದಿಂದ ಅಮೃತ ವಿದ್ಯಾಲಯ

ತಂಡವು ಜಯಗಳಿಸಿದೆ. ಪಂದ್ಯ ಪ್ರಾರಂಭವಾದ

ಎರಡು ನಿಮಿಷದಲ್ಲಿ ಅಮೃತ ವಿದ್ಯಾಲಯದ ಅನುಪ

ಕೇಸರಕರ, ತಮ್ಮ ತಂಡಕ್ಕೆ ಮೊದಲ ಗೋಲನ್ನು

ನೀಡಿದರು. 20 ನಿಮಿಷ ಪಂದ್ಯ ನಡೆದ ನಂತರ

ಸೇಂಟ ಮೇರಿ ತಂಡದ ಋಂಷಂಭ ಕೊಲ್ಲಾಪೂರೆ,

ತಮ್ಮ ತಂಡಕ್ಕೆ ಮೊದಲ ಗೋಲನ್ನು ನೀಡಿದರು. 30

ನಿಮಿಷದ ಆಟದ ನಂತರ ಅಮೃತ ವಿದ್ಯಾಲಯದ

ಪ್ರತಿಕ ಹಂಡೆ, ತಮ್ಮ ತಂಡಕ್ಕೆ ಎರಡನೆಯ ಗೋಲನ್ನು

ನೀಡಿದ ಒಂದೇ ನಿಮೀಷದ ನಂತರ ಸೇಂಟ ಮೇರಿ

ತಂಡದ ಸಾಹಿಲ್ ಜಮಾದಾರ, ತಮ್ಮ ತಂಡಕ್ಕೆ

ಎರಡನೇ ಗೋಲನ್ನು ನೀಡುವದರೊಂದಿಗೆ ಸ್ಕೌರ

ಸಮನಾಗುವಂತೆ ಮಾಡಿದರು. ಆದರೆ ಪಂದ್ಯದ 44

ನಿಮೀಷದಲ್ಲಿ ಪ್ರತೀಕ ಹಂಡೆ, ವಿಜಯದ ಗೋಲು

ತಂದುಕೊಟ್ಟರು. ಹೀಗಾಗಿ ಅಮೃತ ವಿದ್ಯಾಲಯದ

ತಂಡವು 3-2 ಗೋಲುಗಳ ಅಂತರದಿಂದ ಜಯ

ಸಾದಿಸಿತು.

ಎರಡನೇ ಪಂದ್ಯ ಬೇನನಸ್ಮೀತ ಮತ್ತು

ಭಾತಕಾಂಡೆ ತಂಡಗಳ ನಡುವೆ ನಡೆದು ಬೇನನಸ್ಮೀತ

ತಂಡವು ಅಂತಿಮವಾಗಿ 2-1 ಗೋಲಿನ ಅಂತರದಿಂದ

ಜಯ ಪಡೆಯಿತು. ಆಟ ಪ್ರಾರಂಭವಾದ 7

ನಿಮೀಷದಲ್ಲಿ ಭಾತಕಾಂಡೆ ತಂಡದ ಅಮನ

ಹಾಲದಾರ, ಮೊದಲ ಗೋಲನ್ನು ತಮ್ಮ ತಂಡಕ್ಕೆ

ತಂದುಕೊಟ್ಟರು. ಆಟದ 12 ನಿಮೀಷದ ಸಮಯದಲ್ಲಿ

ಬೇನನಸ್ಮೀತ ತಂಡದ ಸುನ್ನಿ ಬೆಂಜವಾಡ, ತಮ್ಮ

ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. ಪಂದ್ಯದ

41 ನೇ ನಿಮೀಷದ ಅವಧಿಯಲ್ಲಿ ಸುನ್ನಿ ಬೆಂಜವಾಡ,

ಬೇನನಸ್ಮೀತ ತಂಡಕ್ಕೆ ವಿಜಯದ ಗೋಲು ತಂದು-

ಕೊಟ್ಟರು. ಅಂತಿಮವಾಗಿ ಬೇನನಸ್ಮೀತ ತಂಡ 2-1

ಗೋಲುಗಳ ಅಂತರದಿಂದ ಜಯ ಪಡೆಯಿತು.

ಮೂರನೇ ಪಂದ್ಯ ಹೇರವಾಡಕರ ಮತ್ತು

ಗೋಲುಗಳು ಅಂತರದಿಂದ ಹೇರವಾಡಕರ ತಂಡವು

ಜಯ ಪಡೆದಿದೆ. ಹೇರವಾಡಕರ ತಂಡದ ಸ್ಮೀತ

ಗವಾಡೆ, ಪಂದ್ಯದ 5 ನೇ ನಿಮೀಷದಲ್ಲಿ ಮೊದಲ

ಗೋಲು ತಮ್ಮ ತಂಡಕ್ಕೆ ತಂದುಕೊಟ್ಟರು. ಪಂದ್ಯದ 14

ನಿಮೀಷದಲ್ಲಿ ಶ್ರೀಹರಿ ಬೇನನಸ್ಮೀತ ತಂಡಕ್ಕೆ ಎರಡನೇ

ಗೋಲು ತಂದುಕೊಟ್ಟರು. 22 ನಿಮೀಷದಲ್ಲಿ ಸ್ಮೀತ

ಗವಾಡೆ, ತಮ್ಮ ತಂಡಕ್ಕೆ ಮೂರನೆಯ ಗೋಲು

ಹಾಗೂ 28 ನೇ ನಿಮೀಷದಲ್ಲಿ ನಾಲ್ಕನೇ ಗೋಲನ್ನು

ಮತ್ತು ಪಂದ್ಯದ 32 ನೇ ನಿಮೀಷದಲ್ಲಿ ಅವರೆ 5 ನೇ

ಗೋಲು ಭಾರಿಸುವ ಮೂಲಕ ಪಂದ್ಯದ ಜಯದ

ರೋವಾರಿಯಾದರು. 34 ನಿಮೀಷದಲ್ಲಿ ಪ್ರತಮೇಶ

ಮಾನೆ, 6 ನೇ ಗೋಲು ಪಡೆದರೆ 7 ನೇ ಗೋಲನ್ನು

46 ನಿಮೀಷದ ಅವಧಿಯಲ್ಲಿ ಮತ್ತೆ ಸ್ಮೀತ ಗಾವಡೆ,

ಮತ್ತೊಂದು ಗೋಲು ಪಡೆದರು ಪಂದ್ಯ 50 ನಿಮೀಷ

ತಲುಪಿದಾಗ ಆದರ್ಶ ಮಾನೆ 8 ನೇ ಮತ್ತು ಅಂತಿಮ

ಗೋಲು ಪಡೆದರು. ಅಂತಿಮವಾಗಿ ಹೇರವಾಡಕರ

ತಂಡವು 8-0 ಗೋಲುಗಳ ಅದ್ಬುತ ಅಂತರದಿಂದ

ಜಯ ಪಡೆಯಿತು.

ನಾಲ್ಕನೇ ಪಂದ್ಯ ಇಸ್ಲಾಮಿಯಾ ಮತ್ತು

ಲವ್ ಡಾಲ್ ತಂಡದ ನಡುವೆ ತುರಿಸಿನ ಪಂದ್ಯ

ನಡೆದು ಎರಡು ತಂಡಗಳು ತಲಾ ಎರಡು ಗೋಲು

ಪಡೆದಿರುವದರಿಂದ ಪಂದ್ಯ ಸಮನಾಗಿದೆ. ಲವ್

ಡಾಲ್ ತಂಡದ ಆರ್.ಎನ್.ಡಿ. 31 ನಿಮೀಷದ ಪಂದ್ಯ

ಸಮಯದಲ್ಲಿ ತಮ್ಮ ತಂಡಕ್ಕೆ ಮೊದಲು ಗೋಲು

ತಂದುಕೊಟ್ಟರು. ಆದರೆ ಪಂದ್ಯ ಆರಂಭವಾದ 2

ಮತ್ತು 3 ನೇ ನಿಮೀಷದಲ್ಲಿ ಇಸ್ಲಾಮಿಯಾ ತಂಡದ

ರೋಮನ ಬೇಪಾರಿ, ಸಮರ್ಥ ಗೌಳಿ, ಇವರು ತಮ್ಮ

ತಂಡಕ್ಕೆ ತಲಾ ಎರಡು ಗೋಲುಗಳನ್ನು ತಂದು

ಕೊಟ್ಟರು. ಆದರೆ ಪಂದ್ಯ 15 ನಿಮೀಷ ನಡೆದಾಗ

ಅಕ್ಷಯ ಲವ್ ಡಾಲ್ ಸ್ಕೂಲ ಪರವಾಗಿ ಮತ್ತೊಂದು

ಗೋಲು ಪಡೆದರು. ಹೀಗಾಗಿ ಪಂದ್ಯವು ಸಮನಾಗಿದ್ದು

ಮತ್ತೊಂದು ಅವಧಿಯಲ್ಲಿ ಮರು ಪಂದ್ಯ ಆಡಿಸಲು

ನಿರ್ಧರಿಸಲಾಗಿದೆ.

 

loading...

LEAVE A REPLY

Please enter your comment!
Please enter your name here