ದಲಿತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು: ಹೂಲಿ

0
14

ಕನ್ನಡಮ್ಮ ಸುದ್ದಿ
ಹುಕ್ಕೆÃರಿ : ದಲಿತರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸದೃಢವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ ಜನಜಾಗೃತಿ ವೇದಿಕೆ ಹುಕ್ಕೆÃರಿ ಬ್ಲಾಕ್ ಅಧ್ಯಕ್ಷ ಲಕ್ಷö್ಮಣ ಹೂಲಿ ಅಭಿಪ್ರಾಯಪಟ್ಟರು.
ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ರವಿವಾರ ‘ಸಂಘಟನೆ ನಡಿಗೆ ಸಮಾಜದ ಕಡೆಗೆ’ ನಿಮಿತ್ತ ಜಾಗೃತಿ ಜಾಥಾ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಪ್ರಸ್ತುತ ದಿನಗಳಲ್ಲಿ ದಲಿತರು ಸಂಘಟಿತರಾಗುವುದು ಅತಿ ಅಗತ್ಯವಾಗಿದೆ. ತನ್ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಏಳಿಗೆ ಹೊಂದಬೇಕು. ಈ ಹಿನ್ನಲೆಯಲ್ಲಿ ನೂತನ ಸಂಘಟನೆ ಹುಟ್ಟು ಹಾಕಲಾಗಿದೆ. ತಾಲೂಕಿನ ಎಲ್ಲ ಗ್ರಾಮಗಳ ದಲಿತರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಈ ಸಂಘಟನೆ ಮೂಲಕ ಒಂದೇ ವೇದಿಕೆಗೆ ಬರಬೇಕು ಎಂದು ಕೋರಿಕೊಂಡರು.
ಜಿಲ್ಲಾ ದಲಿತ ಮುಖಂಡ ಮಲ್ಲಿಕಾರ್ಜುನ ರಾಶಿಂಗೆ, ನ್ಯಾಯವಾದಿ ಆನಂದ ಕೆಳಗಡೆ, ಪುರಸಭೆ ಮಾಜಿ ಸದಸ್ಯ ದಿಲೀಪ ಹೊಸಮನಿ ಮಾತನಾಡಿ, ನೂತನ ಸಂಘಟನೆ ಮೂಲಕ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೆÃಶಿಸಲಾಗಿದೆ. ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ವಿರುದ್ಧ ಹೋರಾಡುವುದು, ಸಮಾಜದಲ್ಲಿ ಬೇರೂರಿರುವ ಅಂಧಕಾರ, ಅನಾಚಾರ, ಅಜ್ಞಾನ ಮತ್ತಿತರ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸುವುದು, ಜತೆಗೆ ಸಮಾಜದ ಯುವ ಸಮುದಾಯವನ್ನು ಜಾಗೃತಿಗೊಳಿಸಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಅಂಬೇಡ್ಕರ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಉಮೇಶ ಭೀಮಗೋಳ ಅಧ್ಯಕ್ಷತೆ ವಹಿಸಿದ್ದರು. ಯಮಕನಮರಡಿ ಬ್ಲಾಕ್ ಅಧ್ಯಕ್ಷ ಶಶಿಕಾಂತ ಮೇತ್ರಿ, ಸಂಕೇಶ್ವರ ಬ್ಲಾಕ್ ಅಧ್ಯಕ್ಷ ಪಿಂಟು ಸೂರ್ಯವಂಶಿ, ಮುಖಂಡರಾದ ಪರಶುರಾಮ ತಳವಾರ, ಕುಮಾರ ಕಳಸಪ್ಪಗೋಳ, ವಿಠ್ಠಲ ಮಾಡಲಗಿ, ಕೆಂಪಣ್ಣಾ ಶಿರಹಟ್ಟಿ, ಸೋಮೇಶ ಜೀವಣ್ಣವರ, ಮಂಜುನಾಥ ಪಡದಾರ, ಸುಧೀರ ಹುಕ್ಕೆÃರಿ, ಶ್ರಿÃನಿವಾಸ ವ್ಯಾಪಾರಿ, ಬಾವುಸಾಬ ಪಾಂಡ್ರೆ, ಪ್ರಮೋದ ಹೂಲಿ, ಗೋಪಾಲ ತಳವಾರ, ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಬಸ್ ನಿಲ್ದಾಣದಿಂದ ಆರಂಭವಾದ ಜಾಗೃತಿ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ ಸಮುದಾಯ ಭವನಕ್ಕೆ ತಲುಪಿತು. ಸಮಾಜದ ಏಳಿಗೆಗೆ ಶ್ರಮಿಸಿದ ಮಹಿಳೆಯರು ಹಾಗೂ ಹಿರಿಯರನ್ನು ಇದೇ ವೇಳೆ ಸನ್ಮಾನಿಸಲಾಯಿತು.

loading...