ದಲಿತರ ಮೇಲೆ ದೌರ್ಜನ್ಯ: ವೆಂಕಟಯ್ಯ ವಿಷಾದ

0
3

ಕನ್ನಡಮ್ಮ ಸುದ್ದಿ-ಧಾರವಾಡ: ಪ್ರಸ್ತುತ ಗ್ರಾಮೀಣ ವಲಯದಲ್ಲಿ ದಿನ ದಲಿತರ ಮೇಲೆ ಇಂದಿಗೂ ಅವ್ಯಾಹತವಾಗಿ ದೌರ್ಜನ್ಯಗಳೂ ನಡೆಯುತ್ತಿರುವದು ವಿಷಾದದ ಸಂಗತಿ ಎಂದು ಕರ್ನಾಟಕ ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಲಹೆಗಾರÀ ಇ. ವೆಂಕಟಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ, ಅಂತರಾಷ್ಟಿçÃಯ ವಿಚಾರ ಸಂಕಿರಣ ಸಮೀತಿ, ಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನ ಹಾಗೂ ಕವಿವಿಯ ಗದಗ ಮತ್ತು ಕಾರವಾರ ಸ್ನಾತಕೋತ್ತರ ಕೇಂದ್ರಗಳ ಸಹಯೋಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೨೮ನೇ ಜನ್ಮದಿನಾಚರಣೆಯ ಅಂಗವಾಗಿ ಕವಿವಿಯ ಸುವರ್ಣ ಮಹೋತ್ಸವ ಭವನದಲ್ಲಿ ‘ಸಮಕಾಲೀನ ಭಾರತದಲ್ಲಿ ಅಂಬೇಡ್ಕರ್‌ರವರ ವಿಚಾರಗಳ ಪ್ರಸುತತೆ’ ಎಂಬ ವಿಷಯದ ರಾಷ್ಟಿçÃಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಸರಕಾರವು ವಿಶೇಷ ನಿಧಿಯನ್ನು ಮೀಸಲಿಟ್ಟಿದ್ದು, ಈ ಯೋಜನೆಯು ೧೯೭೫ರಲ್ಲಿ ಕೇವಲ ಪರಶಿಷ್ಟ್ ಪಂಗಡ ಸಮುದಾಯಗಳಿಗೆ ಮಾತ್ರ ಈ ನಿಧಿಯನ್ನು ಬಳಕೆ ಮಾಡಲಾಗುತ್ತಿತ್ತು ನಂತರ ಈ ಯೋಜನೆಯನ್ನು ಪರಶಿಷ್ಟ ಜಾತಿ ವರ್ಗಗಳಿಗೆ ವಿಸ್ತರಿಸಲಾಯಿತು ಎಂದರು.
ಕವಿವಿ ಅಂಬೇಡ್ಕರ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುಭಾಸಚಂದ್ರ ನಾಟಿಕಾರ ಮಾತನಾಡಿ, ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪರಿಶಿಷ್ಠ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಡಾ. ಅಂಬೇಡ್ಕರ ಅಧ್ಯಯನ ಪೀಠದ ಮೂಲ ಸೌಕರ್ಯಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದರು. ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ ಅಧ್ಯಕ್ಷತೆವಹಿಸಿದ್ದರು. ಡಾ. ಮುನಿರಾಜು ಡಾ. ಎನ್.ಎಮ್ ಸಾಲಿ, ಡಾ. ಆರ್ ಎಲ್ ಹೈದ್ರಾಬಾದ, ಡಾ, ಎಮ್. ಎನ್ ಚಲವಾದಿ ಮತ್ತು ಪ್ರೊ. ಶಿಲಾಧರ ಮುಗಳಿ ಇದ್ದರು.

loading...