ದಾವೂದ್ ಬಂಟ ತುಂಡಾ ಬಂಧನ

0
27

 ಭೂಗತ ಪಾತಕಿ ದಾವೂದ್

ಇಬ್ರಾಹಿಂ ಭಂಟ ಸಯ್ಯದ್ ಅಬ್ದುಲ್ ಕರೀಂ ಅಲಿಯಾಸ್ ತುಂಡಾ

ಎಂಬ ಬಾಂಬ್ ತಜ್ಞ, ಕಟ್ಟಾ ಉಗ್ರನನ್ನು ಇಂದು ಪೊಲೀಸರು

ಬಂಧಿಸಿದ್ದಾರೆ.

ಭಾರತಕ್ಕೆ ಬೇಕಾಗಿದ್ದ 20 ಮಂದಿ ಕಟ್ಟಾ ಉಗ್ರರಲ್ಲಿ ತುಂಡಾ

ಪ್ರಮುಖನಾಗಿದ್ದ. ತುಂಡಾನಿಗೆ ಈಗ ಸುಮಾರು 70 ವರ್ಷ

ವಯಸ್ಸು. ನವದೆಹಲಿ, ಪಾಣಿಪಟ್, ಸೋನಾಪತ್, ಲೂದಿಯಾನ,

ಕಾನ್ಪುರ ಮತ್ತು ವಾರಣಾಸಿಗಳಲ್ಲಿ ನಡೆದ ಸ್ಪೌಟಗಳಿಗೆ ಇವನೇ

ರೂವಾರಿಯಾಗಿದ್ದ.

ದೆಹಲಿ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ

ಭಾರತ-ನೇಪಾಳ ಗಡಿ ಪ್ರದೇಶದಲ್ಲಿ ಬಂಧಿಸಲಾಗಿದ್ದು, ಲಷ್ಕರ್

ಉಗ್ರಗಾಮಿ ಸಂಘಟನೆಯಲ್ಲಿ ಇವನು ಬಾಂಬ್ ತಜ್ಞನಾಗಿದ್ದ

ಸುಮಾರು 40 ಸ್ಪೌಟಗಳ ಕಾರ್ಯ ಚಟುವಟಿಕೆಗಳಲ್ಲಿ ತುಂಡಾನ

ಪಾತ್ರವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

1996 ಮತ್ತು 1998ರಲ್ಲಿ ದೆಹಲಿ ಮತ್ತು ಸುತ್ತಮುತ್ತಲಿನ

ಪ್ರದೇಶಗಳಲ್ಲಿ ನಡೆದಿದ್ದ ಸುಮಾರು 40 ಉಗ್ರಗಾಮಿ ಕೃತ್ಯಗಳಲ್ಲಿ

ತುಂಡಾ ದೆಹಲಿ ಪೊಲೀಸರಿಗೆ ಬೇಕಾಗಿದ್ದ. ಅದಾಗಲೇ ಅವನ

ವಿರುದ್ಧ 33 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು.

ಇದೇ ಉಗ್ರ ಸಯ್ಯದ್ ಅಬ್ದುಲ್ ಕರೀಂ 1990ರ ದಶಕದಲ್ಲೇ

ಭಾರತದಿಂದ ಪರಾರಿಯಾಗಿದ್ದ. ಆದರೆ, ಬಾಂಗ್ಲಾದಲ್ಲಿ ಅವನು

ಸಾವನ್ನಪ್ಪಿದ್ದಾನೆ ಎಂದು ಒಂದು ವರದಿಯಾಗಿದ್ದರೆ, ಇನ್ನೊಂದು

ವರದಿ ಪ್ರಕಾರ ಅವನು ಕೀನ್ಯಾದಲ್ಲಿ ಬಂಧಿತನಾಗಿದ್ದ. ಆದರೆ,

ಅವನನ್ನು ಬಂಧಿಸಲಾಗಿಲ್ಲ ಮತ್ತು ಅವನು ಜೀವಂತವಿದ್ದಾನೆ

ಎಂದು ಕೆಲವು ಮೂಲಗಳು ತಿಳಿಸಿದ್ದವು.

ಯಾರು ಈ ತುಂಡಾ ?: ಮೂಲತಃ ಉತ್ತರ ಪ್ರದೇಶದ

ಪಿಲಾಕುವದವನಾದ ಸೈಯದ್ ಅಬ್ದುಲ್ ಕರೀಂ ಲಷ್ಕರ್-

ಎ-ತೊಯ್ಬಾ ಸಂಘಟನೆಯ ಬಾಂಬ್ ತಜ್ಞನಾಗಿದ್ದ. ಬಾಂಬ್

ಸ್ಪೌಟವೊಂದರಲ್ಲಿ ತನ್ನ ಎಡಗೈಯನ್ನು ಕಳೆದುಕೊಂಡ ನಂತರ

ಇವನಿಗೆ ತುಂಡಾ ಎಂಬ ಹೆಸರು ಖಾಯಂ ಆಯಿತು.

1996-98ರ ಅವಧಿಯಲ್ಲಿ ದೆಹಲಿ ಮತ್ತಿತರೆಡೆಗಳಲ್ಲಿ ನಡೆದ

ಬಾಂಬ್ ಸ್ಪೌಟಗಳ ಪ್ರಮುಖ ರೂವಾರಿ ಈ ತುಂಡಾನೇ ಆಗಿದ್ದ.

1997ರ ಅವಧಿಯಲ್ಲಿ ಇದೇ ತುಂಡಾ ಪಾಕಿಸ್ತಾನದ ಕರಾಚಿ, ಕೀನ್ಯಾ

ಮತ್ತು ಪಶ್ಚಿಮ ಏಷ್ಯಾಗಳಲ್ಲಿ ಸಂಚರಿಸುತ್ತಾ ಪಾಕಿಸ್ತಾನವನ್ನು ತನ್ನ

ನೆಲೆಯಾಗಿಸಿಕೊಂಡಿದ್ದ.

loading...

LEAVE A REPLY

Please enter your comment!
Please enter your name here