ದಿನೇಶ ಗುಂಡೂರಾವ್‌ ಪ್ರತಿಕೃತಿ ದಹಿಸಿ ಪ್ರತಿಭಟನೆ

0
42

ಗುಳೇದಗುಡ್ಡ: ಉತ್ತರಪ್ರದೇಶದ ಮುಖ್ಯಮಂತ್ರಿ ಆಧಿತ್ಯನಾಥ ಅವರು ಕರ್ನಾಟಕ್ಕೆ ಬಂದರೆ ಅವರಿಗೆ ಚಪ್ಪಲಿಯಲ್ಲಿ ಹೊಡಿಯಬೇಕು ಎಂದು ಹೇಳಿಕೆ ನೀಡಿರುವ ಸಚಿವ ದಿನೇಶ ಗುಂಡೂರಾವ್‌ ಅವರ ಹೇಳಿಕೆ ಖಂಡಿಸಿ ನಗರದ ಪುರಸಭೆ ಹತ್ತಿರ ಸ್ಥಳೀಯ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ವತಿಯಿಂದ ಸೋಮವಾರ ಸಚಿವ ದಿನೇಶ ಗುಂಡೂರಾವ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಸೋಶಿಯಲ್‌ ಮಿಡಿಯಾದ ಸಂಚಾಲಕ ಭುವನ ಪೂಜಾರಿ, ಅವಹೇಳನಕಾರಿಯಾಗಿ ಮಾತನಾಡಿರುವ ರಾಜ್ಯ ಸರ್ಕಾರ ಸಚಿವ ದಿನೇಶ ಗುಂಡೂರಾವ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಇಂತಹ ಹೇಳಿಕೆ ನೀಡಿದ್ದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ನಗರ ಬಿಜೆಪಿ ಅಧ್ಯಕ್ಷ ದೀಪಕ ನೇಮದಿ, ಸಂಪತಕುಮಾರ ರಾಠಿ, ಕಮಲು ಮಾಲಪಾಣಿ, ರಾಜು ಗೌಡರ, ಸಿದ್ದಾರ್ಥ ಸಿಂಗದ, ರಾಜು ಚಿಕ್ಕನರಗುಂದ, ಮುತ್ತು ಚಿಕ್ಕರನಗುಂದ, ವಿಜಯ ವಗ್ಗಾ, ಮುತ್ತು ಶಿರೂರ, ಸತೀಶ ಅರಮನಿ, ಮಣಿಕಂಠ ಯಣ್ಣಿ, ಗುರು ಬೂದಿಹಾಳಮಠ, ಗುರು ಅಂಗಡಿ, ರಾಮು ಕಲಾಲ, ನಾಗೇಶ ಹಂಚಾಟೆ, ಸುನೀಲ ಸಾವಳಗಿಮಠ, ಶಿವು ಮಳಗಾವಿ ಮತ್ತಿತರರು ಇದ್ದರು.

loading...