ದಿನೇ ದಿನೇ ಕಾವೇರುತ್ತಿರುವ ಮಹದಾಯಿ ಹೋರಾಟ

0
34

ನರಗುಂದ : ನಮ್ಮ ಪಾಲಿನ ಮಹದಾಯಿ ನದಿ ನೀರನ್ನು ನಮಗೆ ಕೊಡಿಸಿ ಎಂದು ಸರ್ಕಾರಗಳ ಜೊತೆ ಹೋರಾಟ ನಡೆಸಿದ್ದೇವೆ. ಆದರೆ ನಮ್ಮವರೇ ಆದ ಉತ್ತರ ಕರ್ನಾಟಕದ ಶಾಸಕರು,ಸಂಸದರು ಮತ್ತು ಮಂತ್ರಿಗಳು ಮನಸ್ಸು ಹರಿಸಿ ಈ ಸಮಸ್ಯೆಯನ್ನು ಯಾವಾಗಲೋ ಇತ್ಯರ್ಥ ಪಡಿಸದ್ದರಿಂದ ರೈತರು ಧರಣಿ ದಿನೇ ದಿನೇ ಕಾವೇರುತ್ತಿದೆ. ರೈತರ ಹೋರಾಟವೆಂದರೆ ಏನೆಂಬುದನ್ನು ರಾಜಕಾರಣಿಗಳು ಆತ್ಮವಿಮರ್ಷೆಮಾಡಿಕೊಳ್ಳುವ ಕಾಲ ಬಂದಾಗಿದೆ. ಇನ್ನಾದರೂ ಎಚ್ಚೆತ್ತು ಮಹದಾಯಿ ನದಿ ನೀರಿನ ಸಮಸ್ಯೆ ಕಗ್ಗಂಟು ಬಿಡಿಸಲು ರಾಜಕಾರಣಿಗಳು ಸರ್ವಪ್ರಯತ್ನಮಾಡಬೇಕೆಂದು ರೈತ ಮುಖಂಡ ವಿಠಲ ಜಾಧವ ಇಂದಿಲ್ಲಿ ಆಗ್ರಹಿಸಿದರು.
ಮಹದಾಯಿ ಮಲ್ರಪಬೆ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ರೈತರು ನಡೆಸಿದ ರವಿವಾರದ ಧರಣೆ 277 ನೇ ದಿನಕ್ಕೆ ಕಾಲಿರಿಸಿದ್ದು ರೈತರ ಸಭೆಯಲ್ಲಿ ಮಾತನಾಡಿದ ಅವರು, ಹೋರಾಟದ ಮೂಲಕ ಮಹದಾಯಿ ನದಿ ನೀರಿನ್ನು ಪಡೆಯುದೊಂದೇ ನಮ್ಮ ಕರ್ತವ್ಯವಾಗಿದ್ದು ನೀರು ದೊರಯುವವರೆಗೆ ಈ ಹೋರಾಟ ನಿಲ್ಲದು. ರೈತರು ಬಿಸಿಲಿನ ಬೇಗೆಯಲ್ಲಿ ಬಸವಳಿದಿದ್ದಾರೆ. ಜಾನುವಾರುಗಳಿಗೆ ಸರಿಯಾಗಿ ನೀರಿಲ್ಲ. ಮೇವು ಬ್ಯಾಂಕ ಸ್ಥಾಪನೆಗೊಂಡಿಲ್ಲ. ಗೋಶಾಲೆ ಆರಂಭಕಂಡಿಲ್ಲ. ಇಂತಹ ಅನೇಕ ಸಮಸ್ಯೆಗಳಿದ್ದರೂ ಕೊಪ್ಪಳ,ಬೀದರ ಮತ್ತು ಬಾಲ್ಕಿಗಳಂತ ಪ್ರದೇಶಗಳನ್ನು ಆಯ್ಕೆಮಾಡಿ ಸಿದ್ದರಾಮಯ್ಯ ಅಲ್ಲಿ ಬರಗಾಲದ ಸ್ಥಿತಿಯನ್ನು ಅವಲೋಕಿಸಲು ಪ್ರವಾಸ ಕೈಗೊಂಡಿದ್ದಾರೆ. ಎ. 17 ರಂದು ಗದುಗಿಗೆ ವಿವಾಹ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಲು ಬರಬೇಕಾಗಿದ್ದ ಸಿದ್ದರಾಮಯ್ಯ ಕೊನೆಗಳಿಗೆಯಲ್ಲಿ ಅದನ್ನೂ ರದ್ದುಪಡಿಸಿ ವಿಜಯಪುರಕ್ಕೆ ತೆರಳಿದರು. ಇಲ್ಲಿಯ ರೈತರ ಬಗೆಗೆ ಅವರಿಗೆ ಎಳ್ಳಷ್ಟು ಕಾಳಜೀ ಇಲ್ಲ. ಯಡಿಯೂರಪ್ಪ ಎ. 27 ರಿಂದ ಬರಗಾಲ ಪ್ರದೇಶಗಳನ್ನು ವೀಕ್ಷಿಸಲು ರಾಜ್ಯದೆಲ್ಲೆಡೆ ಪ್ರವಾಸ ಕೈಗೊಳ್ಳಲಿದ್ದು ಗದಗಕ್ಕೆ ಬಂದು ಇಲ್ಲಿಯ ಸ್ಥಿತಿಗಳನ್ನು ಗಮನಿಸಿ ರಾಜ್ಯ ಸರ್ಕಾರಕ್ಕೆ ಬಿಸಿಮುಟ್ಟಿಸಬೇಕೆಂದು ಆವರು ಆಗ್ರಹಿಸಿದರು.
ಎಸ್.ಬಿ. ಜೊಗಣ್ಣವರ ಮಾತನಾಡಿ, ಎ. 2 ರಂದು ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷಗಳ ಸಬೆಯಲ್ಲಿ ದೇಹಲಿಗೆ ನಿಯೋಗ ಓಯ್ದು ಪ್ರಧಾನಿಗಳನ್ನು ಭೇಟಿಯಾಗಿ ಮಹದಾಯಿ ಕಳಸಾ ಬಂಡೂರಿ ವಿವಾದ ಕುರಿತು ಚರ್ಚಿಸುವುದಾಗಿ ರೈತರಿಗೆ ಸಭೆಯಲ್ಲಿ ಭರವಸೆ ನೀಡಿದ್ದರು. ದೇಹಲಿಗೆ ನಿಯೋಗ ಯಾವಾಗ ಓಯ್ಯಲಾಗುವುದು ಎಂಬುದನ್ನು ಇದುವರೆಗೂ ಮುಖ್ಯಮಂತ್ರಿಗಳು ಸರಿಯಾಗಿ ವಿವರ ನೀಡಿಲ್ಲ. ಇಂತಹ ರಾಜಕೀಯ ವ್ಯವಸ್ಥೆಯಲ್ಲಿ ರೈತರನ್ನು ತೊಂದರೆಗೆ ಸಿಲಿಕಿಸುವ ಪ್ರಯತ್ನ ರಾಜಕಾರಣಿಗಳಿಂದ ನಡೆದಿರುವುದು ಸರಿಯಲ್ಲವೆಂದು ತಿಳಿಸಿದ ಅವರು, ಮಹದಾಯಿ ನದಿ ನೀರಿನ ವಿವಾದ ನ್ಯಾಯಮಂಡಳಿಯಲ್ಲಿ ಇದ್ದು ಪ್ರಧಾನಿಗಳು ತಮ್ಮ ಅಧಿಕಾರ ಬಳಸಿ ರಾಜೀಮೂಲಕ 7.5 ಟಿಎಂಸಿ ನೀರನ್ನು ಕುಡಿಯಲು ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಅವರು ಆಗ್ರಹಪಡಿಸಿದರು.
ಧರಣಿಯಲ್ಲಿ ಮಹದಾಯಿ ಮಲಪ್ರಭೆ ನದಿ ಜೋಡಣಾ ಹೋರಾಟ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ. ಉಪಾಧ್ಯಕ್ಷ ಪರಶುರಾಮ ಜಂಬಗಿ, ಡಾ. ಎಚ್.ಆರ್. ಹಿರೇಹಾಳ. ಸೋಮಲಿಂಗಪ್ಪ ಆಯಟ್ಟಿ, ಬಸವರಾಜ ಹೆಬ್ಬಳ್ಳಿ, ಪುಂಡಲೀಕಪ್ಪ ಯಾದವ, ವಿಶ್ವನಾಥ ಕೋಳೇರಿ, ಮೃತ್ಯುಂಜಯ ಹಿರೇಮಠ, ಲಕ್ಷ್ಮಪ್ಪ ಮುನೇನಕೊಪ್ಪ, ರಾಮಣ್ಣ ಮರಿನಾಯ್ಕರ್, ಪ್ರಭು ಬೆಂಡಿಗೇರಿಮಠ, ಬಿ.ಎಚ್. ಶಿರಿಯಪ್ಪನವರ, ಕೃಷ್ಣರಟ್ಟಿ ಯರ್ರಂಶೆಟ್ಟಿ, ಚಂದ್ರಶೇಖರಯ್ಯ ಕಿಲಾರಿಮಠ, ಪುಂಡಲೀಕಪ್ಪ ಯಾದವ, ಚಂದ್ರಪ್ಪ ಮುದಕನ್ನವರ, ನಿಂಗಪ್ಪ ಲಿಂಗದಾಳ, ಎಚ್.ಸಿ ದಂಡಿನ, ರಾಮಣ್ಣ ಮರಿನಾಯ್ಕರ್ ಅನೇಕರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here