ದಿವ್ಯಾಂಗ ಚೇತನ-ದಿವ್ಯಾಂಗ ನವಚೇತನ ಶಾಲೆಗೆ ವ್ಹಿಜನ್ ಗವರ್ನರ್ ಭೇಟಿ

0
7

ಕನ್ನಡಮ್ಮ ಸುದ್ದಿ-ಗದಗ: ವಿಕಲಾಂಗ ಚೇತನ ಮಕ್ಕಳಿಗೆ ಬೇಕಿರುವದು ಅನುಕಂಪವಲ್ಲ ಪ್ರೀತಿ, ಸ್ನೇಹ, ಮಮತೆ, ಕಕ್ಕುಲತೆ ಎಂದು ಭಾವಸಾರ ವ್ಹಿಜನ್ ಇಂಡಿಯಾದ ಏರಿಯಾ 101ರ ಗವರ್ನರ್ ಅಶ್ವಥ್ ಸುಲಾಖೆ ಅಭಿಪ್ರಾಯಪಟ್ಟರು.
ಶುಕ್ರವಾರ ಗದುಗಿನ ವಿಶ್ವ ಕಲ್ಯಾಣ (ರಿ)ದ ದಿವ್ಯಾಂಗ ಚೇತನ-ದಿವ್ಯಾಂಗ ನವಚೇತನ ವಿಶೇಷ ಅಗತ್ಯತೆವುಳ್ಳ ಮಕ್ಕಳ ಶಾಲೆಗೆ ಭೇಟಿ ನೀಡಿ ಸನ್ಮಾನಿತರಾಗಿ ಮಾತನಾಡಿದರು. ವಿಕಲಾಂಗ ಚೇತನ ಮಕ್ಕಳನ್ನು ದೇವರಂತೆ ಭಕ್ತಿ ಮತ್ತು ಪ್ರೇಮದಿಂದ ಕಾಣಬೇಕು, ಅವರ ಅಗತ್ಯತೆವುಳ್ಳ ಬೇಡಿಕೆಗಳನ್ನು ಅರ್ಥೈಯಿಸಿಕೊಂಡು ಪಾಲಕ ಪೋಷಕರು ಪೂರೈಸಬೇಕು ಇಂತಹ ಮಕ್ಕಳಿಗೆ ಅಗತ್ಯ ಶಿಕ್ಷಣ ಪೋಷಣ ಮಾಡುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಯ ಕಾರ್ಯ ಅಭಿನಂದನೀಯ ಎಂದರು.
ಅರುಣಕುಮಾರ ಕುಂಠೆ ಮಾತನಾಡಿ, ಎಲ್ಲವೂ ಸರಿಯಾಗಿರುವ ಮಕ್ಕಳನ್ನೇ ಸರಿಯಾಗಿ ಪೋಷಿಸುವಲ್ಲಿ ಕೆಲವೊಮ್ಮೆ ವಿಫಲರಾಗಿರುವ ನಮಗೆ ಇಂತಹ ವಿಕಲಚೇತನ ಮಕ್ಕಳನ್ನು ಪಾಲಕ ಪೋಷಕರು ಹಾಗೂ ಶಾಲೆಯವರು ಈ ಮಕ್ಕಳ ಮನಸ್ಸನ್ನು ಅರಿತುಕೊಂಡು ಸೇವೆ ಮಾಡುತ್ತಿರುವದು ಅಭಿನಂದನೀಯ ಎಂದರಲ್ಲದೆ ಇಂತಹ ಸಂಸ್ಥೆಗಳಿಗೆ ತಮ್ಮಿಂದಾಗುವ ಸಹಾಯ ನೀಡುವ ಭರವಸೆ ನೀಡಿದರು. ಜಯಲಕ್ಷ್ಮೀ ಮಹೀಂದ್ರಕರ, ರಾಜೇಂದ್ರ ತ್ರಿಮಲ್ಲೆ, ಅನುರಾಧಾ ವೈಕುಂಠೆ, ಕಿರಣ ಶ್ಯಾವಿ ಮಾತನಾಡಿದರು.
ಅಶ್ವಥ್ ಸುಲಾಖೆ ಹಾಗೂ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾದ ಬೆಟಗೇರಿಯ ಕಿರಣ ಶ್ಯಾವಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.ಷಣ್ಮಖ ಸುಲಾಖೆ ಸ್ವಾಗತಿಸಿದರು, ಮಂಜುನಾಥ ಹದ್ದಣ್ಣವರ ಸಂಸ್ಥೆ ನಡೆದು ಬಂದ ದಾರಿ ಹಾಗೂ ಪ್ರಗತಿಯನ್ನು ವಿವರಿಸಿ ನಿರೂಪಿಸಿದರು. ಡಾ. ದತ್ತಾತ್ರೇಯ ವೈಕುಂಠೆ ವಂದಿಸಿದರು.
ನಾಗರಾಜ ವಾದೋನೆ, ರಾಜೀವ ಬೇದ್ರೆ ಇದ್ದರು. ಅತಿಥಿಗಳು ವಿಕಲಚೇತನ ಮಕ್ಕಳಿಗೆ ಬಿಸ್ಕೀಟ್, ಚಾಕಲೇಟ್ ವಿತರಿಸಿ ಉತ್ತಮ ಭವಿಷ್ಯಕ್ಕಾಗಿ ಶುಭ ಕೋರಿದರು.

loading...