ದಿ.24 ರೊಳಗೆ ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ

0
18

ಧಾರವಾಡ 13- ಪ್ರತಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು 2012-13ನೇ ಸಾಲಿಗೆ ಸಂಬಂಧಿಸಿದಂತೆ ತಮ್ಮ ಇಲಾ ಖೆಯ ತಾಲೂಕಾವಾರು ಹಾಗೂ ಕಾರ್ಯಕ್ರಮವಾರು ವಾರ್ಷಿಕ ಕ್ರಿಯಾ ಯೋಜನೆಯನ್ನು ಏ. 24 ರೊಳಗೆ ಸಲ್ಲಿಸಬೇಕು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ. ಮೇಘಣ್ಣವರ ಅಧಿಕಾರಿಗಳಿಗೆ ಸೂಚಿಸಿ ದರು.

ಬುಧವಾರ ಜರುಗಿದ ಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತ ನಾಡಿ,ಪ್ರತಿಯೊಂದು ತಾಲೂಕಿಗೂ ಯಾವ ರೀತಿಯಲ್ಲೂ ತಾರತಮ್ಯ ವಾಗದಂತೆ ಎಚ್ಚರವಹಿಸಬೇಕು.  ತಾಲೂಕಾ ಅಧಿಕಾರಿಗಳನ್ನು ಸಂಪರ್ಕಿಸಿ ಅನುದಾನ ಅಗತ್ಯ ಮಾಹಿತಿ ಪಡೆಯ ಬೇಕು.  ಯೋಜನೆಗಳ ಮಾರ್ಗಸೂಚಿ ಗಳನ್ನು ಅನುಸರಿಸಬೇಕು.

ಡಾ.ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲೂಕಿನ ವಿಶೇಷ ಅನುದಾನದ ಕ್ರಿಯಾ ಯೋಜನೆಗೆ ಮತ್ತು ವಿಶೇಷ ಘಟಕ ಯೋಜನೆಗಳಿಗೆ ಹೆಚ್ಚಿನ ಗಮನ ನೀಡ ಬೇಕು. ಒಟ್ಟಾರೆಯಾಗಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳು ಕುಂಠಿತಗೊಳ್ಳದಂತೆ ಕ್ರಿಯಾಯೋಜನೆ ರೂಪಿಸಿ ಸಲ್ಲಿಸಲು ಅಧಿಕಾರಿಗಳಿಗೆ ಮೇಘಣ್ಣವರ ಸೂಚಿಸಿದರು…

loading...

LEAVE A REPLY

Please enter your comment!
Please enter your name here