ದೀಪನಾಥೇಶ್ವರ ದೇವಾಲಯಕ್ಕೆ ಮಹರ್ಷಿ ಆನಂದ ಗುರೂಜಿ ಭೇಟಿ

0
10

 

ಮುಂಡಗೋಡ: ಹಲವು ದಶಕಗಳಿಂದ ಎಣ್ಣೆ ಇಲ್ಲದೆ ದೀಪ ಉರಿಯುವ ತಾಲೂಕಿನ ಚಿಗಳ್ಳಿ ಗ್ರಾಮದ ದೀಪನಾಥೇಶ್ವರ ದೇವಾಲಯಕ್ಕೆ ಶುಕ್ರವಾರ ಸಂಜೆ ಖ್ಯಾತ ಜೋತಿಷಿ ಮಹರ್ಷಿ ಆನಂದ ಗುರೂಜಿ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ಸಭೆಯನ್ನುದ್ದೆÃಶಿಸಿ ಮಾತನಾಡಿದ ಮಹರ್ಷಿ ಆನಂದ ಗುರೂಜಿ, ಇಲ್ಲಿ ಎಣ್ಣೆ ಇಲ್ಲದೆ ಉರಿಯುತ್ತಿರುವ ಮೂರು ದೀಪಗಳು ಕೂಡ ಆಧಿ ಶಕ್ತಿ ದೇವಿಯ ಒಂದು ರೂಪವಾಗಿವೆ.
ಸೂರ್ಯ ಚಂದ್ರ ಇರುವರೆಗೆ ಈ ದೀಪಗಳು ನಿರಂತರ ಉರಿಯಲಿದ್ದು, ಮುಂದೊಂದು ದಿನ ಇಲ್ಲಿ ಒಬ್ಬ ಮಹಾಪುರುಷ ಜನಿಸಿ ಬರಲಿದ್ದು, ಅವನಿಂದಲೇ ಕ್ಷೆÃತ್ರ ಅಭಿವೃದ್ದಿಯಾಗಲಿದ್ದು, ರಾಜ್ಯದಲ್ಲಿ ಅತ್ಯುತ್ತಮ ಪ್ರವಾಸಿ ತಾಣವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದರು.

ದೇವಾಲಯ ಟ್ರಸ್ಟ್ ಅಧ್ಯಕ್ಷ ಶತ್ಯನಾರಾಯಣ, ಸಾಲಗಾಂವ ಗೌರಮ್ಮಾಜಿ ಮಠದ ವಿರುಪಾಕ್ಷಿ ಮಹಾರಾಜರು, ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ, ತಾ.ಪಂ ಸದಸ್ಯ ಗಣಪತಿ ವಡ್ಡರ, ರಾಜಶೇಖರ ಹಿರೇಮಠ ಹಾಗೂ ಟ್ರಸ್ಟನ ಪದಾಧಿಕಾರಿಗಳಾದ ನಾಗರತ್ನ, ಚಂದ್ರಮೋನ, ವಿ.ಎಮ್ ರಾಯ್ಕರ ಮುಂತಾದವರು ಉಪಸ್ಥಿತರಿದ್ದರು.

loading...