ದೀಪಾವಳಿ ಹಬ್ಬದ ಪ್ರಯುಕ್ತ ಹೆಚ್ಚುವರಿಂ ಬಸ್ ಸಂಚಾರ!

0
38

ಬೆಂಗಳೂರು:- ದೀಪಾವಳಿ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ) ಹೆಚ್ಚುವರಿಯಾಗಿ 1,500 ಬಸ್‍ಗಳನ್ನು ವಿಶೇಷವಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಚಾರಕ್ಕೆ ಬಿಡುತ್ತಿದೆ. ಈ ವಿಶೇಷ ಬಸ್ ಸಂಚಾರ ವ್ಯವಸ್ಥೆ ಅಕ್ಟೋಬರ್ 17ರಿಂದ 20 ರವರೆಗೆ ಜಾರಿಯಲ್ಲಿರಲಿದೆ. ಅಗತ್ಯ ಬಿದ್ದರೆ ಇನ್ನಷ್ಟು ದಿನ ವಿಸ್ತರಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ವಿಶೇಷ ಬಸ್‍ಗಳು ಬೆಂಗಳೂರಿನಿಂದ ಹೊರಡಲಿವೆ. ವಿಶೇಷ ಬಸ್‍ಗಳು ಅಕ್ಟೋಬರ್ 22ರಂದು ಬೆಂಗಳೂರಿಗೆ ವಾಪಸ್ ಬರುವ ವ್ಯವಸ್ಥೆಯಾಗಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಿಸಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಹಾಸನ, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಬಸ್ ಗಳು ಹೊರಡಲಿವೆ.

loading...