ದೀಪಾ ಕುಡಚಿಗೆ ಟಾಂಗ್ ಕೊಟ್ಟ ಡಾ. ಸೋನಾಲಿ

0
111

 

ಬೆಳಗಾವಿ

ನಾನು ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲ. ನಾನು ಎಲ್ಲಿಯೂ ಅರ್ಜಿ ಹಾಲಿಲ್ಲ. ನನಗೆ ಆರು ಹುದ್ದೆಗಳು ಎಲ್ಲಿದ್ದಾವೆ ಎಂದು ಬಿಜೆಪಿ ಮುಖಂಡೆ ಸದಸ್ಯ ಡಾ. ಸೋನಾಲಿ ಸರ್ನೋಬತ್ ದೀಪಾ ಕುಡಚಿಗೆ ಟಾಂಗ್ ನೀಡಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ದೀಪಾ ಕುಡಚಿ ನನ್ನ ಸ್ನೇಹಿತೆ. ಅವರು ಏನೂ ಹೇಳಿದ್ದಾರೆ ನನಗೆ ಗೋತ್ತಿಲ್ಲ. ನಾನ ಪಕ್ಷದ ಶಿಸ್ತಿನ ಸಿಪಾಯಿ. ನನಗೆ ವಹಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ ಲೋಕಸಭಾ ಉಪಚುನಾವಣೆಯಿಂದ ಬಿಜೆಪಿ ಅಭ್ಯರ್ಥಿಯ ಪಟ್ಟಿಯಲ್ಲಿ ನನ್ನ ಹೆಸರು ಯಾರ ಸೇರಿಸಿದರು ಎಂದು ಗೋತ್ತಿಲ್ಲ. ನಾನು ನಿಯತಿ ಪೌಂಡೇಷನ್ ಮೂಲಕ ಸಮಾಜ ಸೇವೆ ಮಾಡುತ್ತಿದ್ದೇನೆ ಎಂದು ದೀಪಾ ಕುಡಚಿಗೆ ಟಾಂಗ್ ಕೊಟ್ಟರು.

loading...