ದುಬೈನಲ್ಲಿ ಭಾರಿ ಮಳೆ : ವಿಮಾನಗಳ ಹಾರಾಟ ವಿಳಂಬ, ರದ್ದು ಸಾಧ್ಯತೆ

0
19

ಮಾಸ್ಕೋ:- ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತಡೆರಹಿತ ಭಾರಿ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮತ್ತು ವಿಮಾನಗಳ ಹಾರಾಟ ವಿಳಂಬ ಮತ್ತು ರದ್ದಾಗುವ ಸಾಧ್ಯತೆ ಭಾನುವಾರ ಸಂಜೆವರೆಗೂ ಮುಂದುವರಿಯಲಿದೆ ಎಂದು ದುಬೈ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

ಶನಿವಾರ ದಿನವಿಡೀ ಮಳೆಯಿಂದಾಗಿ ವಿಮಾನಗಳ ನಿಲುಗಡೆ ಪ್ರದೇಶ ಸರೋವರದಂತಾಗಿ ಅನೇಕ ವಿಮಾನಗಳ ಹಾರಾಟ ರದ್ದಾಗಿದೆ ಮತ್ತು ಹಲವು ವಿಮಾನಗಳ ಹಾರಾಟ ವಿಳಂವಬಾಗಿದೆ.

ಭಾರಿ ಮಳೆಯಿಂದಾಗಿ ಭಾನುವಾರ ಮುಂಜಾನೆಯಿಂದಲೇ ದುಬೈ ಇಂಟರ್ನ್ಯಾಷನಲ್ (ಡಿ ಎಕ್ಸ್ ಬಿ) ಯ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ದುಬೈ ವಿಮಾನ ನಿಲ್ದಾಣ ಖಚಿತಪಡಿಸಿದೆ. ನೀರು ನಿಂತ ಕಾರಣ ಹಲವಾರು ವಿಮಾನಗಳ ಹಾರಾಟ ವಿಳಂಬವಾಗಿದೆ, ಹಲವು ವಿಮಾನಗಳ ಹಾರಾಟ ರದ್ದಾಗಿದೆ ಮತ್ತು ಕೆಲವು ಮಾರ್ಗ ಬದಲಾವಣೆಗೆ ಕಾರಣವಾಗಿದೆ.

ಗ್ರಾಹಕರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡಲು ಸೇವಾ ಪಾಲುದಾರರೊಂದಿಗೆ ನಿಕಟವಾಗಿ ಸಂಪರ್ಕದಲ್ಲಿರುವುದಾಗಿ ಪ್ರಾಧಿಕಾರ ತಿಳಿಸಿದೆ. ಆದಾಗ್ಯೂ ಭಾನುವಾ ಸಂಜೆ ನಂತರ ಮಳೆಯಾಗುವ ಹೆಚ್ಚಾಗುವ ಸಾಧ್ಯತೆ ಇದ್ದು ಮುಂದಿನ 24 ಗಂಟೆಗಳ ಕಾಲ ಇಂತಹ ಅಡಚಣೆಗಳು ಇರಲಿವೆ ಎಂದು ಪ್ರಾಧಿಕಾರ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆ.

ವಿಮಾನಯಾನ ವೇಳಾಪಟ್ಟಿಯಲ್ಲಿ ಸಂಭವನೀಯ ಬದಲಾವಣೆಗಳಿಗಾಗಿ ಸಂಪರ್ಕದಲ್ಲಿರುವಂತೆ ದುಬೈ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಯಾಣಿಕರಿಗೆ ಮನವಿ ಮಾಡಿದೆ. ಹವಾಮಾನ ವೈಪರೀತ್ಯದಿಂದಾಗಿ ಸಂಚಾರ ದಟ್ಟಣೆಯನ್ನು ಗಣನೆಗೆ ತೆಗೆದುಕೊಂಡು ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿ ಹೊರಡುವಂತೆ ತಿಳಿಸಿದೆ. ಸಾಧ್ಯವಾದರೆ ಕಾರುಗಳ ಬದಲು ಮೆಟ್ರೋ ಬಳಸುವಂತೆ ಸಹ ಸಲಹೆ ನೀಡಿದೆ.

loading...