ದುಶ್ಚಟ ಬಿಟ್ಟು ಕ್ರೀಡೆಗಳಲ್ಲಿ ಭಾಗವಹಿಸಿ : ಯುವಕರಿಗೆ ಭೀಮಶಿ ಭರಮನ್ನವರ ಕರೆ

0
41

ಗೋಕಾಕ.8:  ಯುವಕರು ದುಶ್ಚಟಗಳನ್ನು ಬಿಟ್ಟು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನಗರಸಭಾ ಸದಸ್ಯ ಭೀಮಶಿ ಭರಮನ್ನವರ ಹೇಳಿದರು.

 ಅವರು ಸೋಮವಾರದಂದು ದುರದುಂಡಿ ಗ್ರಾಮದಲ್ಲಿ ಮಾರುತಿ ದೇವರ ಓಕುಳಿ ನಿಮಿತ್ತವಾಗಿ ನಡೆದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ವಿದೇಶಿ ಕ್ರೀಡೆಗಳಾದ ಕ್ರಿಕೆಟ್, ಬ್ಯಾಡ್ಮಿಂಟನ್ ಕ್ರೀಡೆಗಳನ್ನು ಬಿಟ್ಟು  ಗ್ರಾಮೀಣ ಕ್ರೀಡೆಯಾದ ಕಬ್ಬಡ್ಡಿ ಆಟವನ್ನು ಹೆಚ್ಚಾಗಿ ಯುವಕರು ಆಡಬೇಕು. ನಶಿಸಿ ಹೋಗುತ್ತಿರುವ ಗ್ರಾಮೀಣ ಕ್ರೀಡಿಗಳನ್ನು ಯುವಕರು ವಿದೇಶಿ ಕ್ರೀಡೆಗಳನ್ನು ಮರೆತು ಗ್ರಾಮೀಣ ಕ್ರೀಡೆಗಳಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಯುವಕರಿಗೆ ಕರೆ ನೀಡಿದರು.

        ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರ ಚನ್ನಪ್ಪ ವಗ್ಗನ್ನವರ, ಮಹಾಂತೇಶ ಮೆಳವಂಕಿ, ಆನಂದ ಹಣಜಿ, ಅವಣ್ಣಾ ಗೌಡಿ, ರಮೇಶ ಅಂತರಗಟ್ಟಿ, ದುಂಡಪ್ಪ ನಿಂಗನ್ನವರ, ರಮೇಶ ಮಾಳ್ಯಾಗೋಳ, ಸಂಜು ಅಂತರಗಟ್ಟಿ, ರಮೇಶ ಹುರಮತಿ ಇದ್ದರು.

 

loading...

LEAVE A REPLY

Please enter your comment!
Please enter your name here