ದೆಹಲಿಯ ಅನಾಜ್ ಮಂಡಿಯಲ್ಲಿ ಮತ್ತೆ ಬೆಂಕಿ ಅನಾಹುತ

0
1

ನವದೆಹಲಿ-ದೆಹಲಿಯ ಅನಾಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಭಾರಿ ಬೆಂಕಿ ದುರಂತ ಸಂಭವಿಸಿ 43 ಮಂದಿ ಮೃತಪಟ್ಟ ಘಟನೆ ನಡೆದ ಮರು ದಿನವೇ ಸೋಮವಾರ ಮತ್ತೆ ಜಾನ್ಸಿ ರಸ್ತೆಯ ಅನಾಜ್ ಮಂಡಿ ಪ್ರದೇಶದ ಅದೇ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ.
ಬೆಳಿಗ್ಗೆ 7.39ಕ್ಕೆ ಬೆಂಕಿ ಅವಘಡ ಸಂಭವಿಸಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ. ‘ಕಾಗದ ಪೆಟ್ಟಿಗೆಗಳಿಗೆ ಬೆಂಕಿ ತಗುಲಿದೆ. ಸದ್ಯ ಎಲ್ಲವೂ ನಿಯಂತ್ರಣದಲ್ಲಿದೆ.’ ಎಂದು ಅಧಿಕಾರಿಯೊಬ್ಬರು ಯುಎನ್‍ಐಗೆ ತಿಳಿಸಿದ್ದಾರೆ.
ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸಿವೆ ಎಂದು ಅವರು ತಿಳಿಸಿದ್ದಾರೆ.
ನಿನ್ನೆ ನಾಲ್ಕು ಅಂತಸ್ಸಿನ ಬಹುಮಹಡಿ ಕಟ್ಟಡದಲ್ಲಿದ್ದ ಕಾಗದ ಪೆಟ್ಟಿಗೆ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ ಸಂಭವಿಸಿ ಉತ್ತರ ಪ್ರದೇಶ, ಬಿಹಾರ ರಾಜ್ಯಗಳ 43 ಕಾರ್ಮಿಕರು ಮೃತಪಟ್ಟಿದ್ದರು. ದುರಂತದಲ್ಲಿ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಘಟನೆ ಕುರಿತು ದೆಹಲಿ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

loading...