ದೆಹಲಿ ಗಲಭೆ, ಮೃತರ ಸಂಖ್ಯೆ 42 ಕ್ಕೆ ಏರಿಕೆ

0
0

ನವದೆಹಲಿ:- ದೆಹಲಿಯ ಗಲಭೆ, ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ .
ಜಟಿಬಿ ಆಸ್ಪತ್ರೆಯಲ್ಲಿ ಇನ್ನೂ ನಾಲ್ಕು ಸಾವಿನ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಯಲ್ಲಿ 38 ಸಾವುಗಳು, ಲೋಕ ನಾಯಕ ಜೈ ಪ್ರಕಾಶ್ ಆಸ್ಪತ್ರೆ ಮೂರು, ಮತ್ತು ಜಗ ಪ್ರವೀಶ್ ಚಂದ್ರ ಆಸ್ಪತ್ರೆಯಲ್ಲಿ ಒಂದು ಸಾವಿನ  ಪ್ರಕರಣ ದಾಖಲಾಗಿದೆ.
ಶಾಂತಿ ಕಾಪಾಡಲು ನೆರವಾಗಲು ಕಳೆದ ಸೋಮವಾರದಿಂದ ಸುಮಾರು 7,000 ಅರೆಸೈನಿಕ ಪಡೆಯನ್ನು ಈಶಾನ್ಯ ದೆಹಲಿಯ ಗಲಭೆ  ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಕೋಮು ಸಂಘರ್ಷದಲ್ಲಿ 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜಾಫ್ರಾಬಾದ್, ಮೌಜ್‌ಪುರ  ಮುಖ್ಯ  ಬಾಧಿತ ಪ್ರದೇಶಗಳಾಗಿವೆ.

loading...