ದೇವಿಕೊಪ್ಪ ಗ್ರಾ.ಪಂ.ಸಭೆಯಲ್ಲಿ ಆಶ್ರಯ ಯೋಜನೇಯ ಅವಾಂತರ..

0
51

ಕನ್ನಡಮ್ಮ ಸುದ್ದಿ-ಕಲಘಟಗಿ : ಕಳೆದಹಲವು ವರ್ಷಗಳಿಂದಲೂ. ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳು ದೊರಕುತ್ತಿಲ್ಲ, ವೈಯಕ್ತಿ ಶೌಚಾಲಯಗಳನ್ನು ನಿರ್ಮಿಸಿಕೊಂಡವರಿಗೆ ಸಹಾಯಧನ ತಲುಪಿಲ್ಲ, ಎಂಬಿತ್ಯಾದಿ ದೂರುಗಳು ತಾಲೂಕಿನ ದೇವಿಕೊಪ್ಪ ಗ್ರಾ.ಪಂ.ಸಭೆಯಲ್ಲಿ ತೂರಿ ಬಂದವು.
ಗ್ರಾ.ಪಂ.ಅಧ್ಯಕ್ಷೆ ಶ್ರಿಮತಿ ತಿಪ್ಪವ್ವ ಕ್ಯಾರಿಕೊಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಭೆಯಲ್ಲಿ ಗ್ರಾ.ಪಂ.ವ್ಯಾಪ್ತಿಯ ಗಲಗಿನಗಟ್ಟಿ,ಹವಳದಹಿಂಡಸಗೇರಿ,ಇಚನಳ್ಳಿ,ದೇವಿಕೊಪ್ಪ ತಾಂಡ ಮುಂತಾದಗ್ರಾಮಗಳಿಂದ ಬಂದಿದ್ದ ಆಶ್ರಯ ಯೋಜನೆಯ ವಂಚಿತ ಫಲಾನುಭವಿಗಳು ಗ್ರಾ.ಪಂ.ನಲ್ಲಿ ನಡೆಯತ್ತರುವ ವಾರ್ಡ ಸಭೆಗಳು ಕಾಟಾಚಾರಕ್ಕೆಂಬಂತೆ ನಡೆಯತ್ತಿವೆ, ಗ್ರಾಮಸಬೆಯಲ್ಲಿನ ಫಲಾನುಭವಿಗಳ ಆಯ್ಕೆಯಲ್ಲಿ ಪಕ್ಷಪಾತಮಾಡುತ್ತಿದ್ದು ಆಯಾ ವಾರ್ಡುಗಳಲ್ಲಿನ ಹಿರಿಯರ ಸಮ್ಮುಖದಲ್ಲಿ ಆಯ್ಕೆಯು ನಡೆಯಬೇಕು ಎಂದು ಸಾರ್ವಜನಿಕರು ಸಭೆಯಲ್ಲಿ ಪಟ್ಟು ಹಿಡಿದಾಗ ಆಡಾಳಿತ ಮಂಡಳಿಯವರು ಅದಕ್ಕೆ ಸಮ್ಮತಿಸಿದರು.
ಗೊಂದಲದಗೂಡಾಗಿದ್ದ ಸಭೆಯು ಶಮನಗೊಂಡಿತು ಅಲ್ಲದೇ ಗ್ರಾ.ಪಂ.ಸಭೆಯಲ್ಲಿ ಅಧ್ಯಕ್ಷೆ ತಿಪ್ಪವ್ವ ಅವರ ಅಧಿಕಾರವನ್ನು ಅವರ ಪತಿ ದುರ್ಬಳಿಕೆಯನ್ನು ಮಾಡಿಕೊಳ್ಳುತ್ತರುವುದೆಕೇ..? ಎಂದು ಹಲವು ಜನರು ದೂರಿಕೊಂಡರು ಗ್ರಾ.ಪಂ. ಅಭಿವೃಧ್ದಿ ಅಧಿಕಾರಿ ವಿ.ಎಮ್.ಮೂರಗೌಡ, ರಮೇಶ ಲಮಾಣಿ,ಉಪಾದ್ಯಕ್ಷ ಕೃಷ್ಣಾ ಲಮಾಣಿ, ಸದಸ್ಯರಾದ ಗುರುಸಿದ್ದಪ್ಪ ಟೊಂಗಳೆ,ಶೆಕಪ್ಪ ತುಮ್ರಿಕೊಪ್ಪ,ಸುರೆಶ ಕಟಾವಕರ್,ಶಂಕ್ರಪ್ಪ ನೂಲ್ವಿ,ಈರವ್ವ ಬೇಗೂರ,ಸಾವಿತ್ರಿ ಬಡಿಗೇರ, ದಾಖು ಲಮಾಣಿ, ಸೆರಿದಂತೆ ನೂರಾರು ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here