ದೇಶಕ್ಕೆ ದೊಡ್ಡ ಆರ್ಥಿಕ ಉತ್ತೇಜನ ಪ್ಯಾಕೇಜ್ ಅಗತ್ಯ: ಬ್ಯಾನರ್ಜಿ

0
8

ನವದೆಹಲಿ:- ಕರೋನ ಮತ್ತು ಲಾಕ್ಡೌನ್ ಸಂಕಷ್ಟ ನಿವಾರಣೆಗಾಗಿ ದೇಶದ ಬಡವರು ನಿರ್ಗತಿಕರ ಬದುಕಿನ ಸಹಾಯಕ್ಕಾಗಿ ದೇಶಕ್ಕೆ ದೊಡ್ಡ ಆರ್ಥಿಕ ಉತ್ತೇಜನ ಪ್ಯಾಕೇಜ್ ಅಗತ್ಯವಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ.

ಈ ತನಕ ಸಾಕಷ್ಟು ದೊಡ್ಡ ಹಣಕಾಸು ಪ್ಯಾಕೇಜ್ಗಾಗಿ ಹಣ ಮೀಸಲು ಇಟ್ಟಿಲ್ಲ.ಅಗತ್ಯವಿರುವ ಯಾರಿಗಾದರೂ ರೇಶನ್ ಕಾರ್ಡ್ ಹಸ್ತಾಂತರಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ವೀಡಿಯೊ ಸಂವಾದಲ್ಲಿ ಅವರು ಈ ಸಲಹೆ ಮಾಡಿದ್ದಾರೆ.

ಕೊರೋನ ವೈರಸ್ ಬಿಕ್ಕಟ್ಟಿನಿಂದ ಆರ್ಥಿಕ ಕುಸಿತದ ಬಗ್ಗೆ ರಾಹುಲ್ ತಜ್ಞರೊಂದಿಗೆ ಎರಡನೇ ಸುತ್ತಿನ ಚರ್ಚೆ ನಡೆಸಿದ್ದಾರೆ .ಕಳೆದ ವಾರ ಅವರು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅವರೊಂದಿಗೆ ಸಂವಾದ ಮಾಡಿದ್ದರು.

ಈ ಬಿಕ್ಕಟ್ಟನ್ನು ಹಾಗೂ ಇತರ ವಿಪತ್ತನ್ನು ಹೇಗೆ ನಿರ್ವಹಿಸಬಹುದು ಹಾಗೂ ಪರಿಹಾರ ಕ್ರಮ ಹೇಗೆ ಯೋಜಿಸಬಹುದು ಎಂಬ ವೀಡಿಯೊದಲ್ಲಿ ರಾಹುಲ್ ಚರ್ಚಿಸಿದ್ದಾರೆ.

ರಾಹುಲ್ ಅವರು ರಾಜನ್ ಅವರೋಂದಿಗೆ ಮೊದಲು ಈ ರೀತಿಯ ಚರ್ಚೆ ನಡೆಸಿದ್ದರು.ಕೊರೋನ ವೈರಸ್ ನಿಂದ ಬಾಧಿತರಾಗಿರುವ ಬಡವರಿಗೆ ನೆರವಾಗಲು 65,ಸಾವಿರ ಕೋಟಿರುಪಾಯಿ ಅಗತ್ಯವಿದೆ ಎಂದೂ ಮಾಜಿ ಆರ್ಬಿಐ ಗವರ್ನರ್ ರಾಜನ್ ಸಲಹೆ ಮಾಡಿದ್ದರು.

loading...