ದೇಶದಲ್ಲಿ ಶಾಂತಿ ನೆಲಸಲು ದುಷ್ಟ ಶಕ್ತಿಗಳ ನಾಶವಾಗಬೇಕು: ಅಶೋಕ ಪಟ್ಟಣ

0
62

ರಾಮದುರ್ಗ: ದೇಶದಲ್ಲಿ ಶಾಂತಿ ನೆಲಸ ಬೇಕಾದರೆ ಕೊಮು ಗಲಭೆಗಳನ್ನು ಮಾಡುತ್ತಿರುವ ದುಷ್ಟ ಶಕ್ತಿಗಳನ್ನು ದೂರ ವಿಟ್ಟು, ಬರುವ ಚುನಾವಣೆಯಲ್ಲಿ ಯಾರು ಸಮಾಜದ ಅಭಿವೃದ್ಧಿಗಾಗಿ ಯಾರು ಕೆಲಸ ಮಾಡುತ್ತಾರೆ. ಅವರಿಗೆ ತಮ್ಮ ಮತವನ್ನು ನೀಡಬೇಕೆಂದು ಹಾಲಿ ಶಾಸಕ ಅಶೋಕ ಪಟ್ಟಣ ಅಭಿಮತ ವ್ಯಕ್ತ ಪಡಿಸಿದರು.
ಸ್ಥಳೀಯ ಶ್ರೀನಿವಾಸ್ ಆಯಿಲ್ ಮಿಲ್ ಆವರಣದಲ್ಲಿ ನಡೆದ ಅಂಜುಮನ್ ಎ. ಇಸ್ಲಾಂ ಕಮೀಟಿ ರಾಮದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಮಟ್ಟದ ಅಲ್ಪ ಸಂಖ್ಯಾತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದಲ್ಲಿ ಒಂದು ದೊಡ್ಡ ಶಕ್ತಿ ಧರ್ಮಗಳ ಧರ್ಮಗಳ ಮಧ್ಯ ರಾಜಕೀಯವಾಗಿ ದೇಶದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ. ಧರ್ಮ ವಿಭಜಿಸುವವರನ್ನು ದೂರ ವಿಡಬೇಕು ಅದಕ್ಕೆ ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಮತವನ್ನು ನಾವೆಲ್ಲರೂ ಒಂದೆ ಎಂದು ಯಾರು ಕೆಲಸ ಮಾಡುತ್ತಾರೆಯೋ ಅವರನ್ನು ಬೆಂಬಲಿಸಿ. ಬರುವ ದಿನಗಳಲ್ಲಿ ತಮ್ಮ ಸಮಾಜದ ಅಭಿವೃದ್ದಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಧಾರವಾಡದ ಜಮಿಯತ ಉಲ್ಮಾ ಏ ಹಿಂದ ಸಮಿತಿಯ ಅಧ್ಯಕ್ಷ ಮುಬಲ್ಲಿಗ ಇಸ್ಲಾಂ ಹಜರತ್ ಮೌಲಾನಾ ಸಿರಾಜ ಅಮ್ಮದ ಮಾತನಾಡಿ, ಕಾನದ ಕೈಗಳು ಇಂದು ದೇಶದಲ್ಲಿ ಜಾಜಿ ಜಾತಿಗಳ ಮಧ್ಯ ವೈ ಮನಸ್ಸು ಹರಡುವಂತೆ ಮಾಡುತ್ತಿವೆ, ಇವುಗಳಿಂದ ನಮ್ಮ ಸಮುದಾಕ್ಕೆ ತುಂಬಾ ತೊಂದರೆಯಾಗುತ್ತಿದೆ ನಾವು ರಾಜಕೀಯ ಕುತಂತ್ರಿಗಳ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ನಾವೆಲ್ಲರೂ ಜಾಗೃತರಾಗಬೇಕು. ದುಡ್ಡಿಗಾಗಿ ಮತವನ್ನು ಹಾಕದೆ ಎಲ್ಲ ಸಮಾಜದ ಜನರಿಗೆ ಕುರಿತಾದ ಜನಪರ ಕೆಲಸ ಮಾಡುತ್ತಾರೆ ಅವರಿಗೆ ತಮ್ಮ ನೀಡಬೇಕು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಹತ್ವದ್ದಾಗಿದೆ ಕಾರಣ ಯಾರು ಮತದಾನ ಮಾಡದೆ ವಂಚಿತರಾಗಬಾರದು. ಅಭಿವೃದ್ದಿ ಪರ ಚಿಂತಕರಿಗೆ ತಮ್ಮ ಮತವನ್ನು ನೀಡಬೇಕು ಎಂದು ಹೇಳಿದರು.

ಉಪಸ್ಥಿತಿ ಹಜರತದ ಮೌಲಾನಾ ಇಮಾಮ ಹುಸೇನಸಾಬ್ ಖಾಜಿ, ಮುಪ್ತಿ ಜಹೂರ ಅಹಮ್ಮದ ಹಾಜಿ, ಮೌಲಾನಾ ಇಮಾಮಹುಸೇನ್ ಖಾಜಿ ಅಂಜುಮನ್ ಏ ಇಸ್ಲಾಂ ಸಮಿತಿಯ ಅಧ್ಯಕ್ಷ ಎ.ಎ. ಖಾಜಿ, ದಾವಲಸಾಬ್ ಪೈಲವಾನ್, ತಾಲೂಕಿನ ಎಲ್ಲ ಮುಸ್ಲಿಂ ಸಮಾಜದ ಮುಂಡರು ಭಾಗವಹಿಸಿದ್ದರು.ಬೆಂಗಳೂರ ಸಣ್ಣ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ನಿಗಮದ ನಿದೇರ್ಶಕ ಮಹ್ಮಮದ ಶಫಿ ಬೆಣ್ಣಿ ಸ್ವಾಗತಿಸಿ,ನಿರೂಪಿಸಿದರು. ಜಿಲ್ಲಾ ಪಂಚಾಯತ ಸದಸ್ಯ ಜಹೂರ ಹಾಜಿ ವಂದಿಸಿದರು.

loading...